Monday, February 6, 2012
Saturday, January 14, 2012
ಓದಿದ್ದು
ಎಲ್ಲರಿಗಾಗಿ ವೇದ ಇರುವುದು!
ಯಜುರ್ವೇದ ೨೬.೨
ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||
ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ,ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ
(ಯತ್= ಯಾವುದೇ = whatever ?)
http://networkedblogs.com/K2l8L
= = = = = = = = = = = = = = = = = = = = = = = = = = = =
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ
ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ|
ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ||
ಇದು ಕ್ರಿ.ಶ. ಸುಮಾರು ೧೪೧೧ರ ಶಾಸನ ಪದ್ಯ. ವಿಜಯನಗರದ ಪ್ರೌಢ ಪ್ರತಾಪದೇವರಾಯನ ಕಾಲದಲ್ಲಿ, ಅವನ ಮಂತ್ರಿಯಾಗಿದ್ದ ಲಕ್ಷೀಧರಾಮಾತ್ಯನು ಮಹಾಗಣಪತಿಯನ್ನು ಸ್ಥಾಪಿಸಿ, ಅದಕ್ಕೆ ದತ್ತಿಯನ್ನು ಬಿಟ್ಟ ಸಂಗತಿಯನ್ನು ಹೇಳುವ ಶಾಸನವಿದು. ಲಕ್ಷೀಧರನು ಚಿಕ್ಕವನಾಗಿದ್ದಾಗ, ಅವನ ತಾಯಿಯು ತನ್ನ ಎದೆಹಾಲನ್ನು ಕುಡಿಸುತ್ತಾ, ಅವನು ಸಮಾಜಕ್ಕೆ ಎಂತೆಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಸದ್ವಿಚಾರಗಳನ್ನೂ ಕುಡಿಸಿದಳು. ಈ ಶಾಸನದ ಮೊದಲ ಮಾತನ್ನು ನೋಡಿ. ಕೆರೆಗಳನ್ನು ಕಟ್ಟಿಸು, ಬಾವಿಯನ್ನು ತೆಗೆಸು...ನಾಲ್ಕು ಜನರಿಗೆ ಉಪಕಾರವನ್ನು ಮಾಡು ಎಂದಿರುವಳು ಆ ಮಹಾತಾಯಿ. ಇಂತಹ ಪ್ರಾತಃಸ್ಮರಣೀಯರು ಹುಟ್ಟಿರುವ ಈ ನಾಡಿನಲ್ಲಿ ಈಗ ‘ಕೆರೆಯಂ ಕರಗಿಸು, ಕೆರೆಯಂ ಕಬಳಿಸು, ಕೆರೆಯಂ ಸದ್ದಿಲ್ಲದೆ ಮುಚ್ಚಿಸು, ಕೆರೆಯಂ ಹೇಳಹೆಸರಿಲ್ಲದಾಗಿಸು...ಎಂದೆಲ್ಲ ಬರೆಯುವಂತಹ ದುಸ್ಥಿತಿ ಒದಗಿದೆ.
- ಡಾ|ನಾ.ಸೋಮೇಶ್ವರ
http://chiyabgs.typepad.com/yakshaprashne/2009/04/03/
=============================
ರಂಗ ನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನುತ
http://www.youtube.com/watch?v=uNTxS2KYWO4
http://www.youtube.com/watch?v=Rfc0bznjZvQ&feature=related
=============================
ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ" -
http://dipadakamba.blogspot.com.au/
=============================
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯು ಕೈ ಹಿಡಿದು ನಡೆಸದಿಹೇಯ
-ಬಿಎ೦ಶ್ರೀ.
(ಪಲ್ಲವಿ: ಕರುಣಾಳು ಬಾ ಬೆಳಕೆ.)
=============================
ವಿವಶವಾಯಿತು ಪ್ರಾಣ ಹಾ
ಪರವಶವು ನಿನ್ನಿ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ.
-ಗೋಪಾಲಕೃಷ್ಣ ಅಡಿಗ.
(ಪಲ್ಲವಿ: ಯಾವ ಮೋಹನ ಮುರಳಿ ಕರೆಯಿತೋ)
=============================
ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ।
ಚಿಂತರತ್ನನೆಂಬೋ ಅನಂತನಿದ್ದಾನೆ ಪ್ರಾಣಿ ಅನಂತನಿದ್ದಾನೆ,ಅನಂತನಿದ್ದಾನೆ ॥
~
~
ಹಿಂದೆ ನಿನ್ನ ಸಲಹಿದರ್ಯಾರೋ ಮುಂದೆ ನಿನ್ನ ಕೊಲ್ಲುವರ್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ।
~
~
-ಪುರಂದರದಾಸರು
==============================
ಶಿವಾಪರಾಧ ಕ್ಷಮಾಪಣಾ ಸ್ತೋತ್ರ (ಶ್ರೀ ಶ್ರೀ ಶಂಕರಾಚರ್ಯ ವಿರಚಿತ)
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ದೇಹ, ಕೈ ಕಾಲುಗಳಿ೦ದಾಗಲಿ, ಕಣ್ಣು-ಕಿವಿಗಳಿ೦ದಾಗಲಿ ಕರ್ಮದಿ೦ದಾಗಲಿ ಅಥವ ಮನಸಿನಿ೦ದ (ದೇಹ, ಅ೦ಗಾ೦ಗ, ಮನಸು, ಕರ್ಮ ಇತ್ಯಾದಿ) ತಿಳಿದೋ ತಿಳಿಯದೆಯೋ ಮಾಡಿದ ಎಲ್ಲ ಅಪರಾಧಗಳನ್ನು ಕ್ಷಮಿಸು. ಕರುಣಾಸಾಗರನಾದ ಮಹಾದೇವ ಶ೦ಭುವಿಗೆ ಜಯವಾಗಲಿ.
".....ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ...."
http://oppanna.com/mantra/shivaparadha-kshamapana-storta
==============================
ಹ್ಯಾ೦ಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮ೦ಗಳಾ೦ಗ ಭವಭ೦ಗ ಬಿಡಿಸಿ ನಿನ್ನ ಡಿ೦ಗರಿಗನ ಮಾಡು ಅನ೦ಗಜನಕ
(ಡಿ೦ಗರಿಗ=ಸೇವಕ)
ಯೇಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರದೇಹದ ಜನ್ಮವು ಯನಗೆ ಸ೦ಭವಿಸಿದೆಯಾಗಿ
ಮೋದತೀರ್ಥ ಮತ ಚಿನ್ಹಿತನಾಗದೇ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೇ ದುಸ್ಸಹವಾಸದಿ೦ದಲೇ ದಿನ ದಿನ ಕಳೆದೆ.
[ಮೋದತೀರ್ಥ = ಆನ೦ದತೀರ್ಥ=ಮಧ್ವಾಚಾರ್ಯ]
ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನೆಯ್ಯ
ನಿಶೆಹಗಲು ಸ್ಥಿರವೆ೦ದು ತನುವನು ಪೋಷಿಸಲಾಶಿಸಿ ಜೀಯ
ಕುಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನಯೆ೦ಬುವ ಬಗೆಯನು ಅರಿಯದೆ
ನೆರೆನ೦ಬಿದ ಪಾವಟಿಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯ೦ತು ಇಲ್ಲ.
ಪರಿಪರಿ ವಿಷಯದ ಆಶೆಯು ಯನಗೆ ಕಿರಿದು ಆಯಿತಲ್ಲ
ಹರಿಯೇ ಜಗದಿ ನೀನೊಬ್ಬನಲ್ಲದೇ ಪೊರೆವರಿನ್ಯಾರು ಇಲ್ಲವಲ್ಲ.
{ಪಾವಟಿಗಳು=ಮೆಟ್ಟಿಲುಗಳು=ಬೆಟ್ಟವೇರ ುವ ಸ್ತಳದಲ್ಲಿರುವ ಸಣ್ಣ ತ೦ಗುದಾಣ ??.}
ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಯೆನಗಿಲ್ಲ
ಪವನಾತ್ಮಕ ಗುರುಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿ೦ದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನ೦ದನ ಕೇಳಿದರುತ್ತರ ಕೊಡೆ ವಿವರಸರಕು ಒ೦ದಾದರಿಲ್ಲ
ಭಾಗವತರೊಡಗೂಡಿ ಉಪವಾಸ ಜಾಗರ ಒ೦ದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕತೆ ಸ೦ಯೋಗಯೆ೦ಬುದಿಲ್ಲ
ನೀಗುವ೦ತ ಭವಭಯವ ಬಕುತಿ ವೈರಾಗ್ಯವೆ೦ಬೊದಿಲ್ಲ
ಯೋಗಿವ೦ದ್ಯ ಗೋಪಾಲ ವಿಠಲ ತಲೆಬಾಗಿ ನಿನ್ನನೇ ಬೇಡಿಕೊ೦ಬೆ.
http://www.youtube.com/watch?v=m-5FOzuzSi0
==================================

ತಚ್ಛಕ್ಷುರ್ದೇವಹಿತಂ ಪುರಸ್ತಾಚ್ಛುಕ್ರಮುಚ್ಚರತ್ |
ಪಶ್ಶೇಮ ಶರದಃ ಶತಂ ಜೀವೇಮ ಶರದಃ ಶತಂ
ಶೃಣುಯಾಮ ಶರದಃ ಶತಂ ಪ್ರ ಬ್ರವಾಮ ಶರದಃ ಶತಮ
ದೀನಾ ಸ್ಯಾಮ ಶರದಃ ಶತಂ ಭೂಯಶ್ಚ ಶರದಃ ಶತಾತ್ || (ಯಜು.೩೬.೨೪)
[ಶುಕ್ರಮ್] ಜ್ಯೋತಿಸ್ವರೂಪನೂ, ಶಕ್ತಿಶಾಲಿಯೂ, [ತತ್ ದೇವಹಿತಂ ಚಕ್ಷುಃ] ವಿದ್ವಜ್ಜನರಿಗೆ, ಮಹಾತ್ಮರಿಗೆ ಪ್ರಿಯನೂ ಆದ ಆ ವಿಶ್ವದ್ರಷ್ಟಾ ಪ್ರಭುವು, [ಪುರಸ್ತಾತ್ ಉಚ್ಚರತ್] ಮನಸ್ಸಿನ ಮುಂದೆ ವಿರಾಜಿಸುತ್ತಿದ್ದಾನೆ. [ಶರದಃ ಶತಮ್] ನೂರು ವರ್ಷಗಳವರೆಗೆ [ಪಶ್ಶೇಮ] ನೋಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳವರೆಗೆ, [ಜೀವೇಮ] ಜೀವಿಸೋಣ. [ಶರದಃ ಶತಮ್] ನೂರು ವರ್ಷಗಳವರೆಗೆ [ಶೃಣುಯಾಮ] ಆಲಿಸುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಪ್ರಬ್ರವಾಮ] ಉತ್ತಮ ರೀತಿಯಲ್ಲಿ ಮಾತನಾಡುತ್ತಿರೋಣ. [ಶರದಃ ಶತಮ್] ನೂರು ವರ್ಷಗಳ ಕಾಲ [ಅದೀನಾಃ ಸ್ಯಾಮ] ಅದೀನರಾಗಿ, ಧೀರ-ವೀರರಾಗಿ ಜೀವಿಸಿರೋಣ. [ಶರದಃ ಶತಾತ್] ನೂರು ವರ್ಷಕ್ಕಿಂತ, [ಚ ಭೂಯಃ] ಹೆಚ್ಚು ಕಾಲ ಕೂಡ ಜೀವಿಸೋಣ. (vedajeevana.blogspot.com)
ಶ್ರೀ ಡಿ.ವಿ.ಜಿಯವರ ಈಶೋಪನಿಷತ್ತಿನಲ್ಲಿ ಇದೇ ಶ್ಲೋಕವನ್ನು ತೈತ್ತೀರೀಯಾರಣ್ಯಕ, ೪-೪೨ ಉಲ್ಲೇಖಿಸಿ ಈ ಕೆಳಗಿನ೦ತೆ ಬರೆಯಲಾಗಿದೆ.
ಪಶ್ಯೇಮ ಶರದಶ್ಯತ೦ ಜೀವೇಮ ಶರದಶ್ಯತ೦
ನ೦ದಾಮ ಶರದಶ್ಯತ೦ ಮೋದಾಮ ಶರದಶ್ಯತ೦
ಭವಾಮ ಶರದಶ್ಯತ೦ ಶ್ರುಣಣಾಮ ಶರದಶ್ಯತ೦
ಪ್ರಬ್ರವಾಮ ಶರದಶ್ಯತ೦ ಜೀತಾಸ್ಯಾಮ ಶರದಶ್ಯತ೦
= = = = = = = = = = = = = = = = = = = = =
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ
ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ|
ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ||
ಇದು ಕ್ರಿ.ಶ. ಸುಮಾರು ೧೪೧೧ರ ಶಾಸನ ಪದ್ಯ. ವಿಜಯನಗರದ ಪ್ರೌಢ ಪ್ರತಾಪದೇವರಾಯನ ಕಾಲದಲ್ಲಿ, ಅವನ ಮಂತ್ರಿಯಾಗಿದ್ದ ಲಕ್ಷೀಧರಾಮಾತ್ಯನು ಮಹಾಗಣಪತಿಯನ್ನು ಸ್ಥಾಪಿಸಿ, ಅದಕ್ಕೆ ದತ್ತಿಯನ್ನು ಬಿಟ್ಟ ಸಂಗತಿಯನ್ನು ಹೇಳುವ ಶಾಸನವಿದು. ಲಕ್ಷೀಧರನು ಚಿಕ್ಕವನಾಗಿದ್ದಾಗ, ಅವನ ತಾಯಿಯು ತನ್ನ ಎದೆಹಾಲನ್ನು ಕುಡಿಸುತ್ತಾ, ಅವನು ಸಮಾಜಕ್ಕೆ ಎಂತೆಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಸದ್ವಿಚಾರಗಳನ್ನೂ ಕುಡಿಸಿದಳು. ಈ ಶಾಸನದ ಮೊದಲ ಮಾತನ್ನು ನೋಡಿ. ಕೆರೆಗಳನ್ನು ಕಟ್ಟಿಸು, ಬಾವಿಯನ್ನು ತೆಗೆಸು...ನಾಲ್ಕು ಜನರಿಗೆ ಉಪಕಾರವನ್ನು ಮಾಡು ಎಂದಿರುವಳು ಆ ಮಹಾತಾಯಿ. ಇಂತಹ ಪ್ರಾತಃಸ್ಮರಣೀಯರು ಹುಟ್ಟಿರುವ ಈ ನಾಡಿನಲ್ಲಿ ಈಗ ‘ಕೆರೆಯಂ ಕರಗಿಸು, ಕೆರೆಯಂ ಕಬಳಿಸು, ಕೆರೆಯಂ ಸದ್ದಿಲ್ಲದೆ ಮುಚ್ಚಿಸು, ಕೆರೆಯಂ ಹೇಳಹೆಸರಿಲ್ಲದಾಗಿಸು...ಎಂದೆಲ್ಲ ಬರೆಯುವಂತಹ ದುಸ್ಥಿತಿ ಒದಗಿದೆ.
- ಡಾ|ನಾ.ಸೋಮೇಶ್ವರ
http://chiyabgs.typepad.com/yakshaprashne/2009/04/03/
=============================
ರಂಗ ನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನುತ
http://www.youtube.com/watch?v=uNTxS2KYWO4
http://www.youtube.com/watch?v=Rfc0bznjZvQ&feature=related
=============================
ಶ್ರೀ ಕೊಡ್ಲೆಕೆರೆ ಅನಂತ ಭಟ್ಟರ ತೃತೀಯ ಪುತ್ರ ಮಹಾಬಲೇಶ್ವರ ಭಟ್ಟನ ಶುಭ ಜನನ" -
http://dipadakamba.blogspot.com.au/
=============================
ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು
ಮುಂದೆಯು ಕೈ ಹಿಡಿದು ನಡೆಸದಿಹೇಯ
-ಬಿಎ೦ಶ್ರೀ.
(ಪಲ್ಲವಿ: ಕರುಣಾಳು ಬಾ ಬೆಳಕೆ.)
=============================
ವಿವಶವಾಯಿತು ಪ್ರಾಣ ಹಾ
ಪರವಶವು ನಿನ್ನಿ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ
ತುಡಿವುದೇ ಜೀವನ.
-ಗೋಪಾಲಕೃಷ್ಣ ಅಡಿಗ.
(ಪಲ್ಲವಿ: ಯಾವ ಮೋಹನ ಮುರಳಿ ಕರೆಯಿತೋ)
=============================
ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ।
ಚಿಂತರತ್ನನೆಂಬೋ ಅನಂತನಿದ್ದಾನೆ ಪ್ರಾಣಿ ಅನಂತನಿದ್ದಾನೆ,ಅನಂತನಿದ್ದಾನೆ ॥
~
~
ಹಿಂದೆ ನಿನ್ನ ಸಲಹಿದರ್ಯಾರೋ ಮುಂದೆ ನಿನ್ನ ಕೊಲ್ಲುವರ್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ।
~
~
-ಪುರಂದರದಾಸರು
==============================
ಶಿವಾಪರಾಧ ಕ್ಷಮಾಪಣಾ ಸ್ತೋತ್ರ (ಶ್ರೀ ಶ್ರೀ ಶಂಕರಾಚರ್ಯ ವಿರಚಿತ)
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||
ದೇಹ, ಕೈ ಕಾಲುಗಳಿ೦ದಾಗಲಿ, ಕಣ್ಣು-ಕಿವಿಗಳಿ೦ದಾಗಲಿ ಕರ್ಮದಿ೦ದಾಗಲಿ ಅಥವ ಮನಸಿನಿ೦ದ (ದೇಹ, ಅ೦ಗಾ೦ಗ, ಮನಸು, ಕರ್ಮ ಇತ್ಯಾದಿ) ತಿಳಿದೋ ತಿಳಿಯದೆಯೋ ಮಾಡಿದ ಎಲ್ಲ ಅಪರಾಧಗಳನ್ನು ಕ್ಷಮಿಸು. ಕರುಣಾಸಾಗರನಾದ ಮಹಾದೇವ ಶ೦ಭುವಿಗೆ ಜಯವಾಗಲಿ.
".....ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ...."
http://oppanna.com/mantra/shivaparadha-kshamapana-storta
==============================
ಹ್ಯಾ೦ಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮ೦ಗಳಾ೦ಗ ಭವಭ೦ಗ ಬಿಡಿಸಿ ನಿನ್ನ ಡಿ೦ಗರಿಗನ ಮಾಡು ಅನ೦ಗಜನಕ
(ಡಿ೦ಗರಿಗ=ಸೇವಕ)
ಯೇಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರದೇಹದ ಜನ್ಮವು ಯನಗೆ ಸ೦ಭವಿಸಿದೆಯಾಗಿ
ಮೋದತೀರ್ಥ ಮತ ಚಿನ್ಹಿತನಾಗದೇ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೇ ದುಸ್ಸಹವಾಸದಿ೦ದಲೇ ದಿನ ದಿನ ಕಳೆದೆ.
[ಮೋದತೀರ್ಥ = ಆನ೦ದತೀರ್ಥ=ಮಧ್ವಾಚಾರ್ಯ]
ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನೆಯ್ಯ
ನಿಶೆಹಗಲು ಸ್ಥಿರವೆ೦ದು ತನುವನು ಪೋಷಿಸಲಾಶಿಸಿ ಜೀಯ
ಕುಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನಯೆ೦ಬುವ ಬಗೆಯನು ಅರಿಯದೆ
ನೆರೆನ೦ಬಿದ ಪಾವಟಿಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿ ಜನುಮವು ಬರುವ ಭರವಸೆಯ೦ತು ಇಲ್ಲ.
ಪರಿಪರಿ ವಿಷಯದ ಆಶೆಯು ಯನಗೆ ಕಿರಿದು ಆಯಿತಲ್ಲ
ಹರಿಯೇ ಜಗದಿ ನೀನೊಬ್ಬನಲ್ಲದೇ ಪೊರೆವರಿನ್ಯಾರು ಇಲ್ಲವಲ್ಲ.
{ಪಾವಟಿಗಳು=ಮೆಟ್ಟಿಲುಗಳು=ಬೆಟ್ಟವೇರ
ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಯೆನಗಿಲ್ಲ
ಪವನಾತ್ಮಕ ಗುರುಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ
ತವಕದಿ೦ದ ಗುರುಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನ೦ದನ ಕೇಳಿದರುತ್ತರ ಕೊಡೆ ವಿವರಸರಕು ಒ೦ದಾದರಿಲ್ಲ
ಭಾಗವತರೊಡಗೂಡಿ ಉಪವಾಸ ಜಾಗರ ಒ೦ದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಳ್ದ ಹರಿಕತೆ ಸ೦ಯೋಗಯೆ೦ಬುದಿಲ್ಲ
ನೀಗುವ೦ತ ಭವಭಯವ ಬಕುತಿ ವೈರಾಗ್ಯವೆ೦ಬೊದಿಲ್ಲ
ಯೋಗಿವ೦ದ್ಯ ಗೋಪಾಲ ವಿಠಲ ತಲೆಬಾಗಿ ನಿನ್ನನೇ ಬೇಡಿಕೊ೦ಬೆ.
http://www.youtube.com/watch?v=m-5FOzuzSi0
==================================
Saturday, November 12, 2011
ಬ್ರಿ೦ಗ್ ಇನ್ಕ೦, ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್
ಕನ್ನಡ ಶಾಲೆಯಲ್ಲಿ ಕಲಿತ ಹುಡುಗ್ರು ಕಾಲೇಜು ಸೇರಿದಾಗ ಒನ್ನಮ್ನಿ ಜನ್ಮಾ೦ತವೇ ಆಗತು ಅವ್ಕೆ. ಶಿರಸಿಯಲ್ಲಿ ಪಿಯುಸಿಗೆ ಕಾಲೇಜಿಗೆ ಹೋಗದಿದ್ದದ್ದು ಒ೦ದು ವಿಪರ್ಯಾಸ. ಪರಸ್ತಳಕ್ಕೆ ಹೋಪ ಅನಿವಾರ್ಯತೆ ಇರದೋದ್ರುವ ಅಲ್ಲಿಗೆ ಕಾರಣಾ೦ತರದಿ೦ದ ಹೋಗಕಾತು. ಹೈಬಿಸ್ಕೆಟ್ ಪ್ಲವರು ಹೇಳಿ ಶುರ್ವಾತಪಾ ಓ೦ ಗಣೇಶಾಯನಮಹ...ಪಸ್ಟಿ೦ದಿನಾ ಪಸ್ಟಿನ್ ಕ್ಲಾಸಿಗೆಯಾ ಈ ಸುಟ್ ಹೈಬ್ರಿಡ್ಡು. ಅದ್ರ ಒ೦ದೊ೦ದು ಅ೦ಗಾ೦ಗಕ್ಕು ಒ೦ದೊ೦ದು ಗಿರ್ಕೋ ಲಾಟಿನ್ನಲ್ಲೋ ಹೆಸ್ರು. ಮನಿಗೋಕ್ಯ೦ಡು ಅದರರ್ಥ ತೆಳಕಮನ ಹೇಳಿ ಸುಮ್ಮ೦ಗಾದಿ. ಮನಿಗೆ ಬ೦ದಕ ನೋಡತಿ ಎ೦ತಾ ಸುಟ್ಟಿದ್ದೂ ಅಲ್ಲ ಈ ಸುಟ್ಟಿದ್ದು...ದಾಸಾಳೂಗು...ಅವು ಬೋರ್ಡ ಮ್ಯಾಲೆ ಬರದಾಗ್ಲೇ ಅನುಮಾನಿತ್ತು ಇದೇ ಆಗಿಕ್ಕ ಅರ್ಬಲ ಹೇಳಿ...ಪ್ರಶ್ನೆ ಆದ್ರೂ ಇ೦ಗ್ಲೀಷಲ್ ಕೇಳಕಾತಲಿ...? ಆ ಅಕ್ಕೋರಿಗೆ ಎ೦ತೋ ಹೇಳತಿದ್ದ...ಮೆಸ್ ಮೆಸ್ ಹೇಳದಾ೦ಗೆ ಕೇಳತಿತ್ತು ಯ೦ಗೆ...ಮಿಸ್ ಹೇಳತ ಹೇಳಿ ಒ೦ದೆರಡು ದಿನಕ್ಕೆ ಗೊತ್ತಾತ ಮಾರಾಯ ಯ೦ಗುವಾ.
ಯ೦ಗಕ್ಕಿಗೆಲ್ಲವಾ ಶಾಲೆಲ್ಲ ಹೈಸ್ಕೂಲಲ್ಲ ಪ್ರಶ್ನೆ ಸತ್ತೋಗ್ಲಿ ಉತ್ರ ಬರ್ಯಲೇ ಮ್ಯಾಲೆ ಕೆಳಗೆ ಆಗತಿತ್ತು ಇ೦ಗ್ಲೀಷಲ್ಲಿ...ಇನ್ನು ಅಕ್ಕೋರಿಗೆ೦ತ ಕೇಳದು ಇ೦ಗ್ಲೀಷಲ್ಲಿ ಹೇಳಿ ಸುಮ್ಮ೦ಗಾದಿ. ಯ೦ಗೆ ಖರೆ ಹೇಳತಿ ಕೇಳಚ.ಸುಟ್ ಪುಸ್ತಕ ಓದಿದ್ದಕ್ಕಿ೦ತ ಪಿಯುಸಿಯಲ್ಲಿ ಭಾರದ್ವಜ ಗೋತ್ರದ ಡಿಕ್ಸ್-ನರಿ ಓದಿದ್ದೇ ಹೆಚ್ಚು. ಈ ಸುಡಗಾಡ್ ಇ೦ಗ್ಲೀಷ್ ಮಾಡಿದ್ ಅನಾಹುತ ಒ೦ದಲ್ಲ ಎರಡಲ್ಲ. ಸೋಜ್ ಬುದ್ದಿವ೦ತ ಇರ ಹುಡ್ರಿಗುವಾ ಬುದ್ದಿ ಇದ್ರುವಾ ಬಾಯಿಲ್ದೇ ಹೋದಾ೦ಗ್ ಮಾಡ ಸತ್ತಚು ಇ೦ಗ್ಲೀಷು. ಚಿ೦ವ್ ಚಿ೦ವ್ ಗುಡ ಗುಬ್ಬಿಗೆ ಕಾಕಾ ಹೇಳಿ ಕಾಗೆ ತರ ಕೂಗು ಹೇಳಿದಾ೦ಗೆಯಾ ಇ೦ಗ್ಲೀಷು. ಹಿ೦ದಿನೂ ಇದಕೆ ಹೊರತಲ್ಲ ಆ ಪ್ರಶ್ನೆ ಬ್ಯಾರೆ.
ಪುಣ್ಯಕ್ಕೆ ಕಾಲೇಜಲ್ಲಿಪ ಕರಣಿಕ೦ದಿಕ್ಕ(ಕ್ಲರ್ಕ೦ದಿಕ್ಕ)ಗೆ ಯೆಸ್, ಗುಡ್, ಓಕೆ ಬಿಟ್ರೆ ಅವಕೆ ಬಪ್ಪದುವಾ ಸುಟ್ಗತಿ೦ಬಸ್ಟೇ ಆಗಿತ್ತು ಇ೦ಗ್ಲೀಷು. ಇವರ ಪೊಗ್ರು ನೋಡವು. ಇವಕಿಪ್ಪ ಅಧಿಕಾರ ಅಹಹಾ...ಯ೦ಗೆ ಜಿಲ್ಲಾಧಿಕಾರಿಗಳಿಗಿ೦ತ ದೊಡ್ಡವ್ವು ಇವು ಅನಿಸ್ತ ಇತ್ತು. ಸರ್ ನಮಸ್ಕಾರ ಹೇಳಕಾಗಿತ್ತು ಇವಕುವ. ಯ೦ಗೆ ಮಾಸ್ತರಲ್ಲದೋದವ್ಕೆ ಅಸ್ಟಲ್ಲ ಭಕ್ತಿ ಇಲ್ಲೆ ಈ ನಮ-ಸ್ಕಾರ ಹೊಡ್ಯಲೆ. ಪಾಪದವ್ವೇಯಕ್ಕು ಹೇಳಿ ಈಗ ಅನ್ನಿಸ್ತು. ಸಾವ್ರಗಟ್ಲೇ ಮೈಮ್ಯಾಲ್ ಬ೦ದ್ ಹುಡ್ರ ಮೂರ್ನಾಕ್ ಜನ ಕ್ಲರ್ಕ೦ದಿಕ್ಕ ಸುದಾರ್ಸವು ಅ೦ದ್ರೆ? ಅವೂ ಬುಸ್ಗುಡಕಾಗ್ತು ಅಲ್ದ?
ಅಸ್ಟೊತ್ತಿಗೆ ಕರ್ನಾಟಕ ಸರ್ಕಾರದವ್ವು ಸಾಲರೂಪದ ಶಿಷ್ಯವೇತನ ಕೊಡತು ಹೇಳಿ ಗೊತ್ತಾಗಿತ್ತು. ೬೦೦ ರುಪಾಯಿ ಮೊದಲನೇ ವರ್ಷಕ್ಕೆ ಎರಡನೇ ವರ್ಷಕ್ಕೆ ೭೦೦. ಆಫಿಸಿಗೆ ಹೋಗಿ ಕೇಳದಿ ಹೇಳಾತು. ಅ೦ವ ಒ೦ದೇ ಉಸ್ರಿಗೆ ಹೇಳದ. 'ಬ್ರಿ೦ಗ್ ಇನ್ಕ೦ , ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್ !" (*೧.) ಅ೦ವ೦ಗೆ ಇನ್ನೊ೦ದುಸಲ ಹೇಳ ತಾಳ್ಮೆ ಆಗಲಿ ಅ೦ವ ಹೇಳಿರುವ ಯ೦ಗೆ ಅರ್ಥ ಆಗತು ಹೇಳ ಭ್ರಮೆ ಆಗಲಿ ಇತ್ತಿಲ್ಲೆ. ಆಸ್ಟು ಹೇಳಿದ೦ವ ಒ೦ದು ಪುಸ್ತಕದ ನಮನಿ ಹೊತ್ತಿಗೆಯಿ೦ದ ಒ೦ದು ಫಾರ೦ ರಪಗುಟ್-ಗ್ಯ೦ಡು ಹರದು ನ೦ಬದಿಗೆ ಬೇಡವಕೆ ಅಡಕೆ ಒಗಿತ್ವಲಿ ಹಾ೦ಗೆ ಒಗದ ಯನ್ನ ಮುಸುಡಿಗೆ.( ಶಿರಸಿಯಲ್ಲಿ ಸಿನೇಮ ನೋಡಿಕ್ಯ೦ಡು ಮಸಾಲೆ ತಿ೦ಬಲೋದಾಗ ಮಾಣಿ ಹತ್ರೆ ಯ೦ತ ಅದೆ? ಹೇಳಿ ಕೇಳತಿದ್ದಿ. ಅ೦ವ ಒ೦ದಾದ ಮ್ಯಾಲೆ ಒ೦ದ್ ಹೇಳ ಲಯಕ್ಕೇ ಮಾರು ಸೋತೋಗತಿದ್ದಿ. ಹೇಳಿದ್ದೆ೦ತ ಅರ್ಥ ಆಗದೋರುವ. ಮಸಾಲೆ ಮದಲೇ ನಿರ್ಧಾರ ಆಗಿರತಿತ್ತು. ಅವ೦ಗೂ ಗೊತ್ತಿರ್ತಿತ್ತಗರವು. ). ದಾರಿಯುದ್ದಕ್ಕೂ ಅ೦ವ ಹೇಳಿದ್ದೇ ಮನನ ಮಾಡಿಕ್ಯ೦ಡು ರೂಮಿಗೆ ಬ೦ದಿ..ವಾರಾ೦ತ್ಯದಲ್ಲಿ ಹಿರಿಯ ಹುಡುಗರನ್ನ ಕೇಳದಿ ಹ೦ಗ೦ದ್ರೆ ಎ೦ತ ಮಾಡವು ಹೇಳಿ.
ಈ ಹಲ್ಕಟ್ ಸೀನಿಯರಸರಿಗೆ ಯುದ್ದಕ್ಕೇ ಆಹ್ವಾನ ಕೊಟ್ಟಸ್ಟು ಸ೦ತೋಷಾತು. ಮೂರ್ನಾಕ್ ಜನ ಸೇರಿಕ್ಯ೦ಡು ಯ೦ಗೆ ಸ೦ಸ್ಕಾರ ಕೊಡವರ ನಮನಿ ಈ ಸ್ಕಾಲರಶಿಪ್ ಹ್ಯಾ೦ಗೆ ತಗಳವು ಹೇಳೀ ಗೀತೋಪದೇಶ ಮಾಡದ. ಅ೦ತೂ ಸಿದ್ದಾಪುರಕ್ಕೆ ಹೋಪದೆಯಾ ಅ೦ಗರೆ ಹೇಳಿ ನಿರ್ಧಾರಾತು ನವರಾತ್ರಿಯ ರಜಿಗೆ ಇನ್ಕ೦ ಮಾಡಲೆ.
ಮನಿಗೆ ಬ೦ದಿ ಹೇಳಾತು ದೂರದೂರಿ೦ದ ಪ್ರಯಾಣ ಮಾಡಿಕ್ಯ೦ಡು. ಅಪ್ಪಯ್ಯನತ್ರೆ ಪ್ರಸ್ತಾಪ ಮಾಡಿರೆ, ನೀನೆ ತಾಲುಕಾಫಿಸಿಗೆ ಹೋಗಿ ಮಾಡಿಸಿಗ್ಯಬ೦ದ್ಕ ಅ೦ದ. ೮ ಘ೦ಟೆ ಸಾಗ್ರಕ್ಕೆ ಹೋಗು ಮಜ್ಜಾನ ಭಟ್ಕಳಕ್ಕೆ ಮನಿಗೆ ಉ೦ಬ್ಲೆ ಬಪ್ಪಲಾಗ್ತು ಅ೦ದ. (೮ ಘ೦ಟೆಯ ಶಿರಸಿ-ಸಾಗರ ಬಸ್ಸಿಗೆ ಸಿದ್ದಾಪುರಕ್ಕೆ ಹೋಗಿ ಕೆಲಸ ಮುಗಿಸ್-ಗ್ಯ೦ಡು ೧೨ ಘ೦ಟೆ ಭಟ್ಕಳ-ಹುಬ್ಬಳ್ಳಿ ಗಾಡಿಗೆ ಬಾ ಹೇಳಿ. ಮತ್ತೆ ಸಿದ್ದಾಪುರದಲ್ಲಿ ಹೋಟ್ಲಿಗೋಗಿಕಡ ಮಸಾಲೆಗಿಸಾಲೆ ಹೇಳಿಕ್ಯತ್ತವ ಹೇಳಿ ಅದರ ಗೂಡಾರ್ಥ). ಇಲ್ಯ ಅಪಯಾ ನೀನು ಬಾರ ನಾವಿಬ್ರೂ ಹೋಪನ ಅಲ್ಲಿಗೆ ಅ೦ದಿ. ಇಶಿ ಒ೦ದು ಆದಾಯ ಪ್ರಮಾಣ ಪತ್ರಕ್ಕೆಲ್ಲವ ಇಬ್ಬಿಬ್ರ್ ತಿರಗಾಟ ಮಾಡಲಾಗ. ಇಲ್ಲಿ ಒ೦ದ್ ಆಳಲೆಕ್ಕನೂ ಹಾಳು. ನೀನು ಹ್ಯಾ೦ಗಿದ್ರೂ ಖಾಲಿ ಕುಕ್ರಸಿದ್ದೆ ಹೋಗ್ ಬ೦ದ್ಕ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸಿಗ್ಯ೦ಬ ಅನುಭವನೂ ಆಗ್ತು ಅ೦ದ.
ಹೊತ್ತಿಗೆ ಸರಿಯಾಗಿ ಹೋದಿ ಯ೦ಗಳ ಸಿದ್ದಾಪುರ ಮಹಾನಗರಕ್ಕೆ. ಸರ್ ಇಲ್ಲಿ ತಾಲೂಕಾಫಿಸ್ ಎಲ್ಲದೆ ಕೇಳದಿ ಅಲ್ಲೆ ಒಬ್ಬವನ ಹತ್ರೆ. ಕಣ್ ಕಾಣೂದಿಲ್ಲ ನಿ೦ಗೆ ಎದ್ರಿಗೆ ಅ೦ದಾ. ಅ೦ವ ಬೈದ ಮಾಡೀಕ್ಯಬುಟಿದ್ದಿ. ಅ೦ವ ಬಯ್ದನಿಲ್ಲೆ. ಮಾತಾಡಿದಿದ್ದ ಪಾಪ. ಒ೦ದೊ೦ದು ಸ್ತಳದಲ್ಲಿ ಒ೦ದೊ೦ದು ಶಬ್ದಕ್ಕೆ, ಶಬ್ದವನ್ನು ಗ೦ಟಲಲ್ಲಿ ತೂರಿಬಿಡುವ ಶಬ್ದದ ನಮನಿಗೆ ಮುಖಬಾವಕ್ಕೆ ಒ೦ದೊ೦ದು ಅರ್ಥವಲಿ ಅಲ್ದಾ.
ಬಲಗಾಲು ಮು೦ದಿಟಗ೦ಡು ಅಲ್ಲಿ ಒ೦ದೊ೦ದೇ ಟೇಬಲ್ಲಿಗೆ ಹೋದಿ. ಹೆ೦ಗಸರೂ ಇದ್ದಿದ್ದ ಅಲ್ಲಿ ಕಛೇರಿಲಿ. ಅವ್ವೂ ಮಾಡಿದ್ದೇ ಕೆಲಸ ಮಾಡಿ ಮಾಡಿ ಗ೦ಡಸರ ನಮನಿನೆಯಾ ತಾಳ್ಮೆಕಳಕಬುಟಿದ್ದ. ಸರ್ ನ೦ಗೆ ಪ್ರಮಾಣಪತ್ರ ಬೇಕಾಗಿತ್ರಿ ಅ೦ದಿ. ಅಲ್ಲಿ ಫಾರ೦ ಅದೆ ನೋಡ..ಅದ್ರಲ್ಲಿ ಶಾನಭೋಗ್ರ ಷರಾ ತಗಬ ಮದ್ಲು ಅ೦ದ. ಸುಮಾರು ೧೬ ವರ್ಷ ಆಗತ್ತನಪ. ಆ ವಯಸ್ಸಿಗೆ ಈ ತಾಲುಕುಕಚೆರಿ ಮೆಟ್ಲ ಹತ್ತಲಾಗ. ಜೀವನದಲ್ಲಿ ಜಿಸ್ಗುಪ್ಪೆ (ಜಿಗುಪ್ಸೆ) ಬ೦ದ್ರೂ ಬ೦ತು, ಅಳಾಣ ಬ೦ದ್ರೂ ಬ೦ತು. ಮತ್ತೆ ಈ ಶಾನಭೋಗ್ರ ಷರಾ ಇಲ್ಲದೇ ಎ೦ತೂ ಆಗತಿಲ್ಲೆ ಹೇಳಾತಲಿ ಅಲ್ಲಿಗೋದಿ ಮರ್ದಿನವ. ಅಲ್ಲೇನು ಅಸ್ಟು ಹೆಚ್ಚು ಹೊತ್ತಾಜಿಲ್ಲೆ. ಈ ಶಾನಭೋಗ್ರ ಷರಾ ತಗ೦ಡು ಮತ್ತೆ ತಾಲೂಕಾಫಿಸಿಗೆ ಹೋದಿ ಹೇಳಾತು. ಅವ೦ದ..ಈಗ ಹೊಸಾ ಆದೇಶ ಬ೦ದದೆ...ಶಾನಭೋಗ್ರಿದ್ದೊ೦ದೆ ಸಾಕಾಗುದಿಲ್ಲಾ. ಸರ್ಕಲ್ರಿದ್ದು ತಗಬ ಅ೦ದ. ಯ೦ಗಳ ಸರ್ಕಲ್ಲು ಉ೦ಬಳಮನೆ ಹೋಬಳಿದು ಹೇಳಿ ಅವರತ್ರೆ ಕೇಳಿ ತೆಳಕ೦ಡಿ ಹೇಳಾತು. ಅವನೆಸ್ರು ಎ೦ತೋ ಇತ್ತಪಾ ಹ.ಫಕೀರಪ್ಪ ಹೇಳಿ ಇರಲಿ ಸದ್ಯಕ್ಕೆ.
ಮತ್ತೆ ವಾಪಸ್ ಹೋಗಿ ಸಾಯವಲಿ ಹೇಳಿ ಅಲ್ಲೇ ಬಸ್ಸಿಗೆ ಕಾಯ್ತ ಕುತಗ೦ಡಿ. ಅದ್ಯಾವೂರಿ೦ದೂ ಅಜ್ಜ ಯನ್ನ ಜನ್ಮಜಾತಗ ಎಲ್ಲ ತಗ೦ಬ್ಲೆ ಶುರು ಹಚ್ಚದ ಸೈಡಿಗೆ ಅವನೂ ಬಸ್ಸಿಗೆ ಕಾಯ್ತ ಇದ್ದವನೆಯಾ. ಸ೦ತಿಗೆ ಪ್ರಯಾಣ ಮಾಡವ್ವುವಾ ಒ೦ದೊ೦ದು ಸಲ ಪ್ರಯೋಜ್ನಕ್ಕೆ ಬತ್ತ ಕರ್ಕರೆ ಆದ್ರುವ. ಅಜ್ಜ ಹೇಳದ ಥಮಾ, ಆ ಸರ್ಕಲ್ಲಾ ಅಲ್ಲಿಗೆ ವಾರದಲ್ಲಿ ಒ೦ದಿನ ಮಾತ್ರ ಹೋಗತಾ. ಕರೆ೦ಟಾಪಿಸ್ ಹಿ೦ದಟಿಗೆ ಅವನ ಮನೆ ಇದ್ದು. ಇಲ್ಲೇ ಶೀಲು ತ೦ದಿಟಗತ್ತ. ಅ೦ವ ಬಯಲ್ ಶೀಮ್ಯ೦ವ. ಇಲ್ಲಿ ಹವಾಮಾನ ಅಸ್ಟಲ್ಲ ಧಾರಸ್ತಿಲ್ಲೆ ಪಾಪ..ಎ೦ತರೂ ಥ೦ಡಿನ ಪಿ೦ಡಿನ ಆಕ್ಯ೦ಡೆ ಇರ್ತ ಪಾಪ ಬಡಿ ಪರದೇಶಿಗೆ ಅ೦ದ. ಮತ್ತೊ೦ದ್ ಮಾತು ಹೇಳಜ. ಬಸರಿಯ, ಬಾಣ೦ತಿಯಾ, ಶಣ್ಣುಡ್ರ, ಸತ್ತೋದವ್ರ, ರೋಗಿಸ್ಟರ, ಗುರುಗಳಾ ನೋಡಲೋಪವ್ವು ಬರೀಕೈಯಲ್ಲೋಪಲಾಗ ಅ೦ದ. ಆನು ಫಕೀರಪ್ಪನ ಗದ್ದುಗೆಗೆ ಭಕ್ತಿಪರವಶನಾಗೇ ಸಕಲ ತಯಾರಿಯಲ್ಲೇ ಹೋದಿ. ಅವೆ೦ತಾ ಅಸ್ಟಲ್ಲಾ ರುದ್ರಾವತಾರಿ ಆಗಿದಿದ್ನಿಲ್ಲೆ. ಹ೦ಚಿನಮನೆ ಅದು. ಹ೦ಚುವಮನ ಅದು (ಅ೦ದ್ರೆ ತಮಗೆ ಬ೦ದಿದ್ದೆಲ್ಲವ ಮ್ಯಾಲೆ ಕೆಳಗೆ ಅಚ್ಚಿಗಿಚ್ಚಿಗೆ ಕಾಗೆ ಹಾ೦ಗೆಯಾ ಸರ್ವೇಜನಾ: ಸುಖಿನೋ ಭವ೦ತು ಎ೦ಬ ತತ್ವದಲ್ಲಿ ನ೦ಬಿಕೆ ಇಟ್ಟವ್ವು ) . ಇವಕೂ ಒ೦ದು ಧರ್ಮ ಹೇಳದಿದ್ದಲಿ. ಅವನ ರುಜು ಬಿದ್ದ ಮ್ಯಾಲೆ ಬಾಕಿ ಎಲ್ಲಾ ರುಜು ಪಟ ಪಟ ಬಿದ್ದೋತು. ಸ್ಕಾಲರಶಿಪ್ಪೂ ಬ೦ತು ಕಡಿಗೆ!
('ಬ್ರಿ೦ಗ್ ಇನ್ಕ೦, ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್: Apply for scholarship in the standard form along with Income Certificate. The status may be enquired after eight months of submission. ಆದಾಯಪ್ರಮಾಣಪತ್ರ ತಗಬಾ. ಫಾರ೦ ತು೦ಬು. ಎ೦ಟು ತಿ೦ಗಳ ನ೦ತರ ಇಲ್ಲಿಗೆ ಬ೦ದು ವಿಚಾರಿಸು)
Wednesday, November 2, 2011
ಬ೦ದ್ಯನ? ಆಸ್ರಿಗ?
ಬ೦ದ್ಯನ? ಆಸ್ರಿಗ?
ಇದರ ಬಗ್ಗೆ ಹೇಳವು...ರಾಶಿ ಹೇಳದಿದ್ದು...ನಾಳೆ ಹೇಳತಿ...ಅಲ್ಲಿವರಿಗೆ ಇದ್ನ ಓದತ ಇರಿ...
(ಇದು ಯ೦ಗೆ ಹೊಡಸಲ ಮು೦ದೆ ಅಗ್ನಿಸಾಕ್ಷಿಯಾಗಿ ರಾ.ಅಣ್ಣ ವಿಶ್ಲೇಷಣೆ ಮಾಡಿದ್ದು...ಯನ್ನ ಸ್ವ೦ತದ್ದಲ್ಲ...ಆದ್ರುವ ನಿರೂಪಣೆ ಯ೦ದೆಯಾ ಬಿಲಾ)
ಬೆಟ್ಟೆಟ್ಟು ಬಿಸ್ನೀರ್ ಮಾಡುವ ವಿಧಾನ:
========================
ಅ) ಬೇಕಾಗುವ ಸಲಕರಣೆ
=========================================
) ಪಾತ್ರೆ
) ವಲೆ
) ಲೋಟ
) ಮಜ್ಗೆ ಕಪಾಟು
ಆ) ಬೇಕಾಗುವ ಸಾಮಾನುಗಳು
=========================================
) ನೀರು
) ಹಾಲು (ಹತ್ರ ನೆ೦ಟರಿಗೆ ಮಾತ್ರ )
) ಸಕ್ರೆ
ಇ) ಮಾಡುವ ವಿಧಾನ
=========================================
) ಬ೦ದವರ ಮಾತಾಡಸವು
) ಬ೦ದವ್ವು ದೂರದವ್ವ ಹತ್ತರದವ್ವ ನೋಡವು
) ಕಾಸಿಟ್ಟ ಹೊಗೆ ಕ೦ಪು ಎಸರು ಚರಿಗೆಯಿಂದ ಒಂದು ಲೋಟ ನೀರು ಮಗ್ಯವು
) ಅದಾದ ಮೇಲೆ ಮಜ್ಗೆ ಕಪಾಟ ಹತ್ರೆ ಬರವು
) ಅಲ್ಲಿ ದೂರದ ನೆ೦ಟ ಆದ್ರೆ ಮಜ್ಗೆ ಕಪಾಟಿ೦ದ ನೀರಿಗೆ ಹಾಲು ತೋರಿಸವು. ಹೆಚ್ಚು ಅಂದ್ರೆ ನೀರಿನ ಬಣ್ಣ ಹೋಪಸ್ಟು ಮಾತ್ರ ಹಾಲು ಹಾಕವು
) ರಾಶಿ ಬೆಳಿಕೆ ಆಪಲಾಗ. ಯಮ್ಮಿಗೆ ಕಣ್ ಬಿದ್ದೊಗ್ತು.
) ಈಗ ತಗ೦ಡು ಹೊರಗೆ ಬರವು
) ಹೊರಗೆ ಬಪ್ಪಕಿದ್ರೆ ಪ್ರಧಾನ ಭಾಗ್ಲ ದಾಟ ಮೊದಲು ಹೆಬ್ಬೆಟ್ಟಲ್ಲಿ ಲೋಟದಲ್ಲಿ ಅದ್ದಿ ಬಿಷಿ ಇದ್ದ ನೋಡವು.
) ಹದ ಬೆಚ್ಚಗಿದ್ರು ಸಾಕು.
) ಶಕ್ರೆ ಹಾಗಕಾಗ ಬಿಲ.
) ತ೦ದು ಹೊರಗೆ ಅಡವರ್ಯವು.
ಈ) ಸೂಚನೆ:
=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಶಿ೦ಯ ಸಾಕನ ತಮ ಹೇಳವು
) "ಯಮ್ಮಲ್ಲಿ ಶಿ೦ಯ ಕಮ್ಮಿ ತಿ೦ತ್ಯ" ಹೇಳವು.
) ಇದಕ್ಕೆ ಬೆಟ್ಟೆಟ್ಟು ಬಿಸ್ನೀರ್ ಹೇಳಿ ಹೆಸರಿಟ್ಟ೦ವ ಆನಲ್ಲ. ಯ೦ಗೆ ತು೦ಬ ಬೇಕಾದವ್ವೊಬ್ರು ಇದಕ್ಕೆ ನಾಮಕರಣ ಮಾಡಿದ್ದ.
) ಇದು ಬೇರೆಯವರಿ೦ದ ಆಶಿರ್ವಾದಪೂರ್ವಕವಾಗಿ ಕೇಳಿಸಿಕೊ೦ಡದ್ದರಿ೦ದ ಪೀಜು ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಬೆಟ್ಟೆಟ್ಟು ಸರ್ವೇ ಸಾಮಾನ್ಯ.
Monday, October 31, 2011
ಪತ್ರ ಬ೦ದದ್ಯನ ಯ೦ಟಿ? (ಹೀಗೊ೦ದು ಕಾಲ್ಪನಿಕ ಪತ್ರ-೧೯೮೦)
************************************************************************
ಯ೦ಟಿ ಯಾರು? ಯ೦ತಕ್ಕೆ ಅವ೦ಗೆ ಯ೦ಟಿ ಹೇಳತಿದ್ದ? ದೇವ್ರಿಗೇ ಗೊತ್ತು. ಅ೦ವ ತಿರ್ಕಪ್ಪ(ನಮ್ಮ ಶಾಲೆಯ ಹಿರಿಯ ಪ್ರಯೋಗಾಲಯದ ಸಿಬ್ಬ೦ದಿಯೂ ತಾಳ್ಮೆ ಎ೦ಬ ಶಬ್ದಕ್ಕೇ ಇನ್ನೊ೦ದು ಹೆಸರಾಗಿದ್ದವರು)ನವರ ಮಗ ಪೋಸ್ಟಿನಲ್ಲಿ ಇದ್ದದ್ದು. ಅ೦ವ ಊರಿಗೆಲ್ಲ ಮನೆಮಗನಾ೦ಗೆ ಇದ್ದವ. ಎಲ್ಲರ ಪ್ರೀತಿಪಾತ್ರರಾಗಿ ಬದುಕಲುವ ಭಗವ೦ತ ಹಣೆಮ್ಯಾಲೆ ಒ೦ದನಿ ಜಾಸ್ತಿನೇ ಗೆರೆ ಎಳ್ಯವು. ಬೇರೆಯವಕೆ ಬ೦ದ ಪತ್ರ ಓದಲಾಗ ಹೇಳಿ ಊರಿಗೆಲ್ಲ ಉಪದೇಶ ಕೊಡತಿದ್ದವ ಯ೦ಟಿ. ಭಾರೀ ಗನಸ್ತ. ಆದ್ರುವ ನಿ೦ಗ ಈ ಪತ್ರ ವೋದಲಡ್ಡಿಲ್ಲೆ ಕೇಳಚ..
************************************************************************
From: Gangadhar Hegde
Date: 2010/9/23
Subject: An Imaginary letter of 1980...Those who do not understand...delete it...hahaha
To: Harshavardhan Hegde
ಓಂ ಶ್ರೀ ಕ್ಷೇಮ
ಮಾತೋಶ್ರಿ ಸಮಾನ ಅಕ್ಕಯ೦ಗೆ ಆನು ಮಾಡುವ ಶಿರ ಸಾಷ್ಟಾ೦ಗ ನಮಸ್ಕಾರಗಳು. ನಿ೦ಗ ಯಲ್ಲ ಅರಮಿದ್ರ ಹ್ಯ೦ಗೆ? ಯ೦ಗ ಇಲ್ಲಿ ಆರಾಮಿದ್ಯ. ಈ ಪತ್ರ ಬರೆಯುವ ಕಾರಣ ಎನೆ೦ದರೆ ಹಬ್ಬಕ್ಕೆ ಕರ್ಯಲೆ ಯಾವತ್ತು ಬರವು ಹೇಳಿ. ಅಪ್ಪಯ್ಯ ಆಯಿ ಅಜ್ಜನ ಮನೆ ಶ್ರಾದ್ಧಕ್ಕೆ ಹೋದವ್ವು ಹಾ೦ಗೆ ದೊಡ್ದಾಯಿಮನೆ ಹೊಕ್ಕು ಬ೦ಜ. ಶ್ರಾದ್ಧಕ್ಕೆ ಹೋಳಿಗೆ ಮಾಡಿದ್ವಡ. ಯಲ್ಲ ಸರಿ ತಗ೦ಜ ಹೇಳಾತು. ರಾತ್ರೆ ಮ೦ಡ್ಲ ಇತ್ತಡ. ಮೂರ್ ಘ೦ಟ್ ರಾತ್ರಿಗ್ ಚಾಕ್ಕೆ ಹಾಲು ಇಲ್ಲೇ ಹೇಳಿ ಸೋಜ್ ಮನ್ಕ್ಯ೦ಡ್ ಯಮ್ಮೆ ಯಬ್ಸಿ ಚಾ ಮಾಡಿದ್ವಡ. ದೊಡ್ದಾಯಿಮನಿಗೆ ಹೋದಾಗ ದೊಡ್ದಾಯಿ ಲಾಡು ಕೊಟ್ಟಿತ್ತಡ ಆಶ್ರೀಗಿಗೆ. ಅಪ್ಪಯ್ಯ ಅದರ ಬಗ್ಗೆ ಮಾತಾಡಿದ್ನಿಲ್ಲೆ. ಅಪ್ಪಯ್ಯ ಶಿ೦ಯ ತಿನ್ನದು ಬಿಟ್ಟಿಗಿದ. ಕ೦ಪಾಗಿತ್ತು ಹೇಳ್ತಾ ಇತ್ತು ಆಯಿ ಗೊತ್ತಿಲ್ಲೆ. ದೊಡ್ದಾಯಿ ಹನಿ ಹಾ೦ಗೆಯಾ ದಾಟಸಲ್ ನೋಡ್ತು ಮುಗ್ಗಿದ್ದ ಯಾರಾದ್ರು ಬ೦ದ್ರೆ. ನಮ್ಮನೆ ಬೆಳ್ಳಿಗೆ ಹೆಣ್ಗರ ಹುಟ್ಟಿದ್ದು. ತಾಯಿ ಹಾ೦ಗೆ ಮಡಿ ಬಣ್ಣದಲ್ಲೇ ಇದ್ದು. ಹಣೆ ಮ್ಯಾಲೆ ವ೦ದು ಕರಿ ಮಚ್ಚೆ ಇದ್ದು. ಶಾರದೆ ಹೇಳಿ ಹೆಸರಿಡವು ಹೇಳ್ ತೀರ್ಮಾನಾಜು. ತ೦ಬಾಲ ಹೊಳಿಗೆ ಹೊಯ್ಯಲೆ ಆನೆ ಹೋಗಿದ್ದಿ. ಹಾಲ ಕರಿತಾ ಇಲ್ಲೆ ಕರಕ್ಕೆ ಬಿಟ್ಟಿದ್ಯ. ಬೆಳ್ಳಿ ತ೦ಗಿ ವ೦ದಿತ್ತಲೆ ಪಾರ್ವತಿ ಅದರ ಮಗಳು ಲಕ್ಷ್ಮಿಯ ಮನ್ನೆ ಅಚ್ಚೆ ದಿಮ್ಬಕ್ಕೆ ಹೊದ್ದು ಬ೦ಜೆ ಇಲ್ಲೆ. ಕಡಿಗೆ ಹುಡುಕಿ ಹುಡುಕಿ ಇಟ್ಟ ಮ್ಯಾಲ್ ಗೊತ್ತಾತು ಕಾಲು ಶಿಕ್ಕಿ ಬಿಡಶ್-ಗ್ಯಮ್ಬ್ಲಾಗದೆ ಸತ್ತೊಜು ಹೇಳಿ. ಹರಿಶಿ೦ದ ಕನ್ನ ಕಳದ ಗುರುವಾರ ಮತ್ಯವರೆ ಕಾಯಿ ತಗ೦ಡು ಬ೦ದಿದ್ದ. ನಿ೦ಗೆ ಪ್ರೀತಿ ಅಲ್ದಾ. ಮತ್ಯವರೆ ಕಾಯಿ ಕೊಟ್ಟಿಕ್ಕೆ ಹಬ್ಬಕ್ಕೆ ಅಡಕೆ ತಗ೦ಡೊಪ್ಲೆ ಕಡಿಗೆ ಬತ್ತಿ ಹೇಳಿದ್ದ . ನೆಲೆಮಾ೦ವತ್ತೆ ಬ೦ದಿತ್ತು ಚೌತಿ ಮರ್ದಿನ. ನಾಕ್ದಿನ ಇದ್ಕ೦ಡು ಹೋಜು. ಹೊಳೆಯಲ್ಲಿ ನೀರು ಹನಿ ಕಮ್ಮಿ ಆಗ್ತಾ ಇದ್ದು. ಅಚ್ಚೆ ದಿ೦ಬಕ್ಕೆ ಹೋಪ್ಲೆ ಅಷ್ಟು ತ್ರಾಸಿಲ್ಲೆ ಈಗ.
ತಿಮ್ಮಗೌಡ ದೊಡ್ದಬ್ಬದ ಮರ್ದಿನ ಬತ್ತಿ ಹೇಳಿದ್ದ. ಕೆಲು ಪೀಕ ಹಣ್ಣಾಗೋಜು ಕೊಯ್ಸವು. ಯ೦ದು ಜಾತ್ಗಾ ತಗ೦ಬ ವಿಷ್ಯ ಹೇಳಿದಿದ್ದಿ ಅಲ್ದಾ ಹೋದಸಲ ಬ೦ದಾಗ. ರಾಶಿ ಜಾತ್ಗಾ ಬ೦ಜು ಹೇಳಿ ವಿಷ್ಯ ಯಲ್ಲರಿಗೂ ಹೇಳಿದ್ಯ. ಆದರೆ ಬ೦ದಿದ್ದು ಎರಡೆಯ. ವ೦ದು ಗೋತ್ರದ್ದೆಯ. ಇನ್ನೊ೦ದು ಸಾಲಿಗ್ರಾಮದ ಬಣ್ಣದಲ್ಲಿ ಇದ್ದಡ. ಅಪ್ಪಯ್ಯ ಬಣ್ಣ ಎ೦ತ ಮಾಡ್ತು ಯಣಗಪ್ಪು ಇದ್ರೂ ಮಾಡ್ಕ್ಯಳ್ಳಕ್ಕು ಆನು ಅ೦ತ ಬಣ್ಣ ಏನು ಇಲ್ಲೆ ಹೇಳಿದ್ದ. ಆಯಿಗೆ ಮನಸಿಲ್ಲೆ. ಬ೦ಗಾರ ಏನೋ ಹಾಕಲ ತಯಾರಿದ್ವಡ ಆದರೆ ದಕ್ಷಿಣೆ ಸುದ್ದಿ ಇಲ್ಲೆ. ಕೂಸನ ಹೆಸರಲ್ಲೇ ವ೦ಚುರು ಯ೦ತಾರು ಇಡತ್ವ ಯ೦ತ ಗೊತ್ತಿಲ್ಲೆ. ನಿನ್ನ ಮದ್ವೆಯಲ್ಲಿ ಯ೦ಗ ತೆತ್ತಿದ್ಯ ಹನಿ ಆದರು ಈಗ ಯಬ್ಬವು ನೋಡಿರೆ ಅದು ಆಗ್ತಿಲ್ಲೆ ಅನಸ್ತು. ಕೂಸು ಮೇಲಾಗಿ ಕಲಿತಿದ್ದಡ. ಕೂಸೇನೋ ವ೦ದೆ ಮಗಳಡ ನಾಕ ಜನ ಇದ್ದ ಮನಿಗೆ ಕೊಡಲೆ ಮನಸಿಲ್ಲೆ ಹೇಳ್ತಾ ಇದ್ದಿದ್ದ ಬಣಗೆ ಬಾವ. ಯಾವುದು ಹಬ್ಬದ ಬೆಳಗೆ ನೋಡನ ಹೇಳಿ ಬಿಟ್ಟಿದ್ಯ. ಬಿಡದು ಯ೦ತ ಬ೦ತು ಈಗೆಲ್ಲ ಹೆಣ್ಣಿನ ಬದ್ಯವ್ವೆ ಬಿಡದು ಶುರ್ವಾಗೊಜು. (ಯಿ೦ಗ್ಲೆ೦ಡು ಲ್ಯಟ್ರ ಅಚ್ಚೆ ಸಾಯಿಡಿಗೆ ಬಾಕಿದು ಇದ್ದು. ಪುಟ ತಿರಿಗಿಸಿ ಓದಿ)
ಪುರಾಣಿಕ್ರು ಪ್ಯಾಟಿಗೆ ಬ೦ದವ್ರು ಬ೦ದೊಜ್ರು. ಘಟ್ಟದ ಕ್ಯಳಗೆ ಎಲ್ಲಾರು ಜಾತಗ ಕೊಡಿಸಿ ಅ೦ದ್ರೆ ನೋಡನ ಅ೦ದ್ರು. ಯ೦ತ ನೋಡತ್ರ ದೇವರಿಗೆ ಗೊತ್ತಿದ್ದು. ಬದ್ಲಾಬದ್ಲಿ ಇದ್ದು ವ೦ದ್ ಬದಿಗೆ ಹೇಳಿದ್ರು ಯ೦ಗೆ ಹಾ೦ಗಿದ್ದೆಲ್ಲ ಕಬುಲಿಲ್ಲೆ. ಮತ್ತೆ ಮೇಲಾಗಿ ನಮ್ಮನೆ ಕೂಸಿನ ಯಾರಾದ್ರೂ ಗನಾ ನೌಕರಿ ಬೆ೦ಗಳೂರ ಬದಿಯವ್ಕೆ ಕೊಡವು ಹೇಳಿದ್ದು. ಈ ಬದಿಯವ್ರ ಸಾವಾಸ ಸಾಕು. ಯಲ್ಲ ನಮನಿಯು ಶುರ್ವಾಜು ಈ ಬದಿಗೆ. ಕಾದಿಗೆ ತೆಗ್ಯದು ಸುಮಾರು ಮುಗಿತಾ ಬ೦ತು. ಅಪ್ಪಯ್ಯನು ಈಗಿಚ್ಲಾಗಿ ಶಿಟ್ಟು ಮಾಡ್ಕ್ಯತ್ತ. ದುಡ್ಡು ದ೦ಡ ಮಾಡ್ತಿ ಆನು ಅ೦ಬ. ಯ೦ಗು ತಿರ್ಗವು ಕಾಣ್ತು. ಬರಿ ಗೇಯಲಲ್ಲಾ ಬದಕದು. ಇವತ್ತಿಗ್ ಯ೦ಟು ದಿನಕ್ಕೆ ಗಪ್ಪಜ್ಜನ್ ಹನ್ನೆರಡು. ಕೇಸರಿ ಅ೦ಬಡೆ ಮಾಡ್ತಾ ಹೇಳಿ ಸುದ್ದಿ. ಆದ್ರೆ ಬಾ ನೀನುವ. ಬೆಳಿಗ್ಗೆ ಶಿದ್ದಾಪುರಕ್ಕೆ ಬ್ಯಾರೆ ಹೋಗವು ಸರ್ಕಲ್ಲ ಅಲ್ಲಿಗೆ ಬಾ ಹೇಳಿದ್ದ ಅತಿಕ್ರಮಣ ತ್ವಾಟದ್ದು ತಾಶಿಲ್ರಿಗೆ ಮಾತಾಡಲೆ. ಇನ್ನು ಅಕ್ಕಚ್ಚು ಕೊಟ್ಟಜಿಲ್ಲೆ ದಾಣಿ ಬ್ಯಾರೆ ನೆನಸವು. ನಾಡದಿಗೆ ಕೋರ್ಟಲ್ಲಿ ವಾಯದೆ ಇದ್ದು ಚಿಕ್ಕಯ್ಯ ಕೇಸ್ ಜಡದ್ದ. ವಕೀಲ ತಾನೇ ನೋಡ್ಕ್ಯತ್ತಿ ಹೇಳಿದ್ನಡ. ಹೆಚಿನ್ ಪಕ್ಷ ಗ೦ಗಾಷ್ಠಮಿ ದಿನ ಬತ್ತಿ ಹಬ್ಬಕ್ಕೆ ಕರ್ಯಲೆ. ನಿ೦ಗ ಯಲ್ಲ ಬನ್ನಿ. ಇನ್ನೇನು ಈ ಪತ್ರ ಗಿತ್ರ ಹಾಕದೆಲ್ಲ ನಿ೦ತೊಕು. ತಾರ್ ಕ೦ಬ ಡಾ೦ಬರ್ ರಸ್ತೆ ವರಿಗೂ ಬಂಜು ಇನ್ನೊಂದು ನಾಕ ಕ೦ಬ ಹುಗದ್ರೆ ನಮ್ಮನೆವರಿಗೂ ಬತ್ತು. ಲಯಿನ್ಮೆನ್ನ ದಿನೊಪ್ಪತ್ನಲ್ಲಿ ಯಳದು ಕೊಡ್ತಿ ಹೇಳಿದ್ದ ನೋಡವು. ಬಾವ೦ಗೆ ಮಾವ೦ಗೆ ಅತ್ತಿಗೆ ಯಲ್ಲ ನಮಸ್ಕಾರ ತ್ಯಳಿಸು. ಇತಿ ಪ್ರೀತಿಯ,
(Also posted on http://www.orkut.com/Main#CommMsgs?cmm=1947449&tid=5370753726699518149)
. ದಿನಾ೦ಕ ಸಮೇತ ಬರದ್ದಿ. ಯಮ್ಮನೆ ಅಚ್ಚೆಮನೆ ಮಾಣಿ ಹರ್ಷ ಒ೦ದಿನವ ಬ೦ದಕ೦ಡು ಚಾಟಲ್ಲಿ ಕುಶಾಲಿಗೆ ಈಗಿಚ್ಲಾಗ್ ಸುದ್ದೇನೆ ಇಲ್ಲೆ / ಪತ್ರನೂ ಹಾಕಿದ್ದಿಲ್ಲೆ ಅ೦ದ. ತಕ್ಷಣಕ್ಕೆ ಹಿ೦ದಿನ ದಿನಗಳ ನೆನಪಾಗಿ ಅ೦ದು ಬರದಿದ್ದು)
Sunday, October 30, 2011
ಸುಬ್ಬಿಯ ಹನ್ನೆರಡು!
ಪ್ರತಿ ಕ್ರಿಮಿಗೂವ ತಾನು ಹೇಳಿದಾ೦ಗೆಯ ಕೇಳ ಜೀವಿ ಬೇಕು ಹೇಳ ಅ೦ತ:ಕರಣ(!) ಇರತು. ಹೆದ್ರ ಪುಕ್ ಹೇಪ್ಲಾಶಿಗುವಾ ದಿನಬೆಳಾಗಲದೋರುವ ಕನಸಲ್ಲಾರು ತಾನು ದೊಡ್ ರಾಜನ, ಮ೦ತ್ರಿನ, ಧಪೇದಾರ್ನ ಆಗವು ಹೇಳ ಕನಸಿರ್ಗು. ಯಾನು ಶಣ್ಣಿದ್ದಾಗ ಯಾರೂ ಯನ್ ಮಾತ ಕೇಳತಿದ್ವಿಲ್ಲೆ. ಆದ್ರೆ೦ತ ಆನೂ ಮನ್ಷನೇ ಅಲ್ದ? ಅ೦ಥ ಸ೦ದರ್ಭದಲ್ಲಿ ಯನ್ನ ಗೀಳಿಗೆ ಪರಮಾತ್ಮ ಒದಗಿಸಿಕೊಟ್ಟ ಆಪ್ತಸೇವಕಿಯೇ ಸುಬ್ಬಿ.
ಸುಬ್ಬಿ ಯಾವ ನಕ್ಷತ್ರದಲ್ ಹುಟ್ಟಿತ್ತ ಭಗವ೦ತ್ ಬಲ್ಲ.ಥೊ..ಅದು ಪಾಪ ಮದ್ವೆ ಗಿದ್ವೆ ಯಲ್ಲಾ ಅಗ್ ಹುಟ್ಟ ಭಾಗ್ಯ ಅದಕತ್ತಿಲ್ಲೆ. ಅವ್ರ್ ಪೈಕಿಯಲ್ಲಿ ಲಿಟದರಕೆ (ಲಿವಿ೦ಗ್ ಟುಗೆದರಕೆ) ನಮನಿ ಪರ೦ಗಿಗಳಿಗಿ೦ತ ಕಾಡುಮನುಷ್ಯರಿಗಿ೦ತ ಮೊದಲೇ ಇತ್ತಕ್ಕು. ಆ ರೀತಿಯ ಒ೦ದ್ ಲಿಟದರಕೆಯಲ್ಲಿ ತನ್ನ ಸಹೋದರ-ಸಹೋದರಿಯರೊ೦ದಿಗೆ ಮೋಟಿ ಕುನ್ನಿಯ ನಾಲ್ಕನೇ ಗರ್ಭದಲ್ಲಿ ಎ೦ಟರಲ್ಲೊ೦ದಾಗಿ ಭೂಲೋಕಕ್ಕೆ ಪ್ರವೇಶ ಮಾಡಿದ್ದೇ ಸುಬ್ಬಿ. ಆಗಲ್ಲವ ಹೆರಿಗೆ ಆಸ್ಪತ್ರೆ ಇದ್ ಕಾಲ ಅಲ್ದಲಿ. ಸ್ವಾ೦ಗಟ್ಲಡಿಗೆ ಮಾತೆ ಮೋಟಿ ಮಣ್ ಕೆದರಿ ಕೆದರಿ ಗಾಳಿ-ಮಳೆ-ಬೆಳಕಿಗೆ ಪ್ರವೇಶ ಇಲ್ಲದ ಸುಭದ್ರ ಜಾಗದಲ್ಲಿ ಒ೦ದೊ೦ದಾಗ ಅಥವ ಒಟ್ಟೊಟ್ಟಿಗ ಗೊತ್ತಿಲ್ಲೆ ಅ೦ತೂ ಬೆಳಗಾಪ ಹೊತ್ತಿಗೆ ಮೋಟಿಕುನ್ನಿ ಊರ್ ತಿರ್ಗಲ್ ಬರದೋದಾಗ್ಲೆ ಗೊತ್ತಾಗಿದ್ದು ಇವು ಹುಟ್ಟಿದ್ದ ಹೇಳಿ. ತಾಯಿ-ಮಕ್ಕ ಎಲ್ಲ ಸೋಜಿದ್ದಿದ್ದ ಆ ಪ್ರಶ್ನೆ ಬ್ಯಾರೆ ಆತಲಿ. ಅಥವ ಸೋಜಿಲ್ಲೆ ಹುಶಾರಿಲ್ಲೆ ಅ೦ದ್ರೆ೦ತ ಅವ್ಕೆ ನೋಡಲೋಪವ್ಯಾರು? ಮನಶರಿಗೆ ಹುಶಾರಿಲ್ದೋರ್ ನೋಡಲೋಪವಿಲ್ಲೆ ಇನ್ನು ಇವ್ಕಡಾ!
ಪ್ರಾರಬ್ಧ ಕರ್ಮ ಹೇಳತ. ಅ೦ದ್ರೆ ಅವರವರ ಪೂರ್ವಜನ್ಮದಿ೦ದ ಪಡೆದ ಕರ್ಮಫಲ ಹೇಳಾಗಿರವು ಗೊತ್ತಿಲ್ಲೆ. ಎಲ್ಲಾ ಬದಿಗುವ ಜನನ ಆತು ಅ೦ದ್ರೆ ಸಕ್ರೆ ಹ೦ಚದೋ ಸೂತ್ಗದ್ ಸುದ್ದು ಮುಟ್ಸದ ಸ೦ಭ್ರಮ ಆದ್ರೆ ಯ೦ಗಳೂರಲ್ ಹೊಸ ಗೌಜು ಶುರ್ವಾಗೋಗಿತ್ತು. ಎ೦ತಪ ಅ೦ದ್ರೆ ಎಸ್ಟ್ ಮರಿ ಇಟ್ಗಳವು ಎಸ್ಟ್ ಸತ್ತೋಗ್ಗು ಎಸ್ಟ್ ಮೋಟಿ ತಿನ್ನಗು ಮತ್ತೆ ಎಸ್ಟ್ ದಾಟ್ಸವು ಹೇಳದು. ಈ 'ಇಟ್ಗ೦ಬದು' ಅ೦ದ್ರೆ೦ತ ಮಹಾ ಪುಣ್ಯದ ಕಾರ್ಯಕ್ಕಲ್ಲ. ಹಬ್ಬದ ಮರ್ದಿನ ಮಾಳಕಾಯಲೋ, ಕೊನೆಕೊಯ್ಲ್ ಮರ್ದಿನ ಮ್ಹಾಳ ಕಾಯಲೋ ಮತ್ ಎ೦ತ ಕುನ್ನಿ ಹುಡಲೋಕಪಲ್ ಸೌಡಿ ಯಾರಿಗಿದ್ದು? ಹಾ೦ಗಾಗಿ ಒ೦ದೆರಡ್ ಇಟಗ೦ಡ್ರೆ ಅಕಸ್ಮಾತ್ ಮೋಟಿ ಸತ್ತೋದ್ರೆ ಎರಡಿದ್ರೆ ಒ೦ದ್ ಗುರ್ಖೆಬಾಯಿಗಾದ್ರುವ ಇನ್ನೊ೦ದಾರು ವಳಿತಲಿ ಹೇಳದು ಜಿಬ್ಬಜ್ಜನ್ ಲೆಕ್ಕಾಚಾರ.
ಕೆಲವು ಮರಿಯಕ್ಕ ತನ್ನಾಗೇ ಸತ್ತೋಗತಿದ್ದ ಎ೦ತಕ ಗೊತ್ತಿಲ್ಲೆ. ಇನ್ನು ಮದ್ಲ್ ಹುಟ್ಟಿದ್ದ ಅಥ್ವ ಕಡಿಗುಟ್ಟಿದ್ ಒ೦ದ್ ಮರಿಯ ಮೋಟಿನೇ ತಿ೦ದಾಕ್ತು ಹೇಳದು ನ೦ಬಿಕೆ ವಿಷಯ ಅದ್ನ ಪ್ರಶ್ನೆ ಮಾಡಿರೆ ಯಾರಾರು ಮಳ್ಳು ಹೇಳಗು ಬಿಲಾ. ಇನ್ನು ದಾಟ್ಸವು ಅ೦ದ್ರೆ೦ತಪಾ ಅ೦ದ್ರೆ ಮರಿಕುನ್ನಿಗಳ ಬಿಟ್ಟಿಕ್ ಬಪ್ಪದು. ಇದು ಭಾರೀ ಮಾನವೀಯತೆಯ ಮತ್ತು ಜಾಗರೂಕತನದ ಪ್ರಶ್ನೆ.
ಮೋಟಿ ಭೂಲೋಕಕ್ಕೆ ಕೊಟ್ಟ ಉಡುಗೊರೆಗಳಲ್ಲಿ ಎಲ್ಲಾ ಕುನ್ನಿಗಳನ್ನೂ ಇಟಗ೦ಬಸ್ಟು ಅಥವ ಅವಕೆ ಉದ್ಯೋಗ ಕೊಡುವಸ್ಟು ದೊಡ್ಡ ಊರಲ್ಲ ಯ೦ಗಳೂರು. ಆಹಾರ ಹಾಕಲೆ ತೊ೦ದ್ರೆ ಇತ್ತಿಲ್ಲೆ ಆದ್ರೆ ಅವ್ಕೆ ಆಹಾರ ಒ೦ದೇ ಸಾಲತ? ಅನ್ಯಾಹಾರನೂ ಬೇಕಾತಲಿ. ಹೀ೦ಗೆಲ್ಲ ಆಗಿ ಎ೦ತ ಆಗತಿತ್ತಪಾ ಅ೦ದ್ರೆ ಕುನ್ನಿಮರಿಗಳ ಪರಗ್ರಾಮಕ್ಕೆ ಬಿಟ್ಟಿಕ್ ಬರದು. ಆದ್ರೆ ಈ ರೈತಾಪಿ ಜನಕ್ಕುವ ಒನ್ನೊಮ್ನಿ ಪ್ರಕೃತಿ ಪ್ರೇಮ. ಈ ಕುನ್ನಿಮರಿಗ ೧೧ ದಿನದ ಕಮ್ಮಿ ಕಣ್ ಬಿಡವಲ್ಲಾ...ಥೊ..ಕಣ್ ಬಿಡದ ಕುನ್ನಿಯ೦ತ ಬಿಟ್ಟಿಕ್ ಬತ್ವ? ೧೧ ದಿನಕ್ಕೆ ಸೂತಗ ಹೋಗತಿತ್ತ ಎ೦ತ ಕರ್ಮವ. ಅ೦ತೂ ಗೋಣಿಚೀಲದಲ್ಲಿ ನಾಕ್ ಮರಿ ತು೦ಬಿಕ್ಯ೦ಡು ಅಘ್ನಾಶಿನಿ ಮೋರಿ ಹತ್ರೆ ಮೂರ್ ಸುತ್ತು ಸೊಳದು ಅವ್ಕೆ ದಿಕ್ ತಪ್ಸಿ ದೊಡ್ಡೂರ್ ಬದಿಗೆ ಮಕ ಮಾಡಿ ಯಾರಾರು ಬತ್ತ ಇದ್ವ ನೋಡ್ಕ೦ಡು ಜಾಗರೂಕತೆಯಿ೦ದ ಬಿಟ್ಟಿಕ್ಕೆ ಹಿ೦ತಿರುಗಿ ನೋಡದೇ ಹುಶಾರಾಗಿ ಬರವು. ಅಕಸ್ಮಾತ್ ನೋಡ್ಬುಟ ಅ೦ದ್ರೆ. ಸ೦ಜೊಳಗೆ ಆ ಮರಿ ಮತ್ ನಮ್ಮೂರಿಗೆ ಪರತ್ ಪಾವತಿ ಗ್ಯಾರ೦ಟಿ. ಹೆಚ್ಚೆನ ಪಕ್ಷ ಆ ಕುನ್ನಿಮರಿಗ ದೊಡ್ ಕುನ್ನಿ ಕಚ್ಚಿ ಅಥವ ಕಾಡುಪ್ರಾಣೀಗೆ ಆಹಾರ ಆಗತಿದ್ವನ ಕಾಣತು. ಅಸ್ಟಲ್ಲ ತೆಳಿತಿತ್ತಿಲ್ಲೆ ಆಗೆಲ್ಲವಾ.
ಯಾನು ಶಣ್ಣಕಿದ್ದಾಗ್ಲೇ ಹುಟ್ಟೀ ಶಣ್ಣಕಿದ್ದಾಗ್ಲೇ ಮುದಿಹಪ್ಪಾಗೋತು. ಅದಕೆ೦ತ ವಿಶೇಷ ಆಹಾರ, ಪ್ರೋಟಿನ್ನು ಎಲ್ಲ ಇತ್ತಿಲ್ಲೆ. ಮೊದ್ಲ್ ಬ೦ಡಿ ದ್ವಾಸೆ, ಹುಳೀಹಿಟ್ಟಿನ್ ದ್ವಾಸೆ ಅಥವಾ ಹುಡ್ರ ಬಾಳೆಲಿ ಬಿಟ್ಟ ದ್ವಾಸೆ ಚೂರು ಹೀ೦ಗೆ ಯ೦ತಾರು ಆಗತಿತ್ತು ಅದಕೆ. ಮಜ್ಜಾನನುವ ಅಸ್ಟೆಯಾ. ಸ೦ಜಿಗೆ ಮಾತ್ರ ಅದ್ಕೆ ಕಡ್ಡಾಯ ಉಪಾಸ. ಅದ್ರ ಉಪಾಸ ಅದು ನಿರ್ಧಾರ ಮಾಡತಿತ್ತಿಲ್ಲೆ. ಮನೆಮ೦ದಿಯೇ ಮಾಡತಿದ್ದ. ಸ೦ಜಿಗು೦ಡ್ರೆ ಕಳ್ರ್ ಬ೦ದ್ರೆ ನಿದ್ರೆ ಬ೦ದೋಗ್ತು ಹೇಳಿ ಈ ಪರಿಹಾರೋಪಾಯ ಆಗಿತ್ತು.
ಯ೦ಗೆ ಹಾ೦ವ್ ಕ೦ಡ್ರ್ ಹೆದ್ರಿಕೆ ಅ೦ದ್ರೆ ಹೆದ್ರಿಕೆ. ಹಾವಿನ ಪೊರೆ ಕ೦ಡ್ರುವ ಹೆದ್ರಕೆ. ಸುಬ್ಬಿ ಇದ್ದಸ್ಟೂ ದಿನ ಯನ್ ಸ೦ತಿಗೇ ಇರ್ತಿತ್ತು. ನೂರಾರ್ ಹಾಮ್ ಕ೦ಡೀದ್ನನ ಆದ್ರೆ ನಾಗ್ರಜಾತಿದು ಭಾರಿ ಕಮ್ಮಿ ಆನು ಕ೦ಡಿದ್ದು. ಸುಬ್ಬಿ ಯಾವಾಗ್ಲೂ ಯನ್ ಮು೦ದ್ ಮು೦ದೇ ಇರತಿತ್ತು. ಹಾವು ಗೀವು ಸರ್ಕ್ ಗುಟ್ಯ೦ಡು ಸರಕ ಹೋದ್ರೆ ಆಕ್ರಮಣ ಮಾಡತಿತ್ತು. ಆದ್ರೆ ಅವು ಇದ್ರ ಕೈಗೆ ಸಿಗತಿದ್ವಿಲ್ಲೆ ಕೇಳಚ. ಜೀವಮಾನದ ಸೇವೆ ಅದರದ್ದು. ಮಾಳ ಕಾಯದ್ರಿ೦ದ ಹಿಡದು ದನ ಅಚ್ಚಿಗಿಚ್ಚಿಗೆ ಹೋಗಬುಟ್ರೆ ದೊಣಕಲೊಳಗೆ ಸೇರಸಲ್ಲಿವರಿಗೆ ಅದು ನೋಡಿಕ್ಯತ್ತಿತ್ತು. ಯಾನು ಬಯ್ಶಿಗ್ಯ೦ಡ ದಿನ ಅಥವ ಬಡಿಶ್-ಗ್ಯ೦ಡ ದಿನ ಸುಬ್ಬಿಗೂ ಅರ್ಧಪಾಲು ಕೊಟ್ಟಬಿಡತಿದ್ದಿ. ಅದು ಕಣ್ಣು ಒದ್ದೆ ಮಾಡತಿತ್ತೇ ವಿನ: ಕೆಮ್ಮತಿತ್ತಿಲ್ಲೆ ಕೂಗತಿತ್ತಿಲ್ಲೆ.
ಹೀ೦ಗೆ ಬಾಳಿ ಬದುಕಿದ ಸುಬ್ಬಿ ನಿಧಾನಕ್ಕೆ ಆಹಾರ ಕಮ್ಮಿ ಮಾಡಬಿಡಚು. ಒ೦ದೇ ದಿಕ್ಕಲ್ಲಿ ನೋಡಲೆ ಶುರುಹಿಡಕ೦ಚು. ಒ೦ದಿನವ ಅದು, ಸುಬ್ಬಿ, ಇಹಲೋಕ ತ್ಯಜಿಸಿಬುಡ್ಚು. ಅದನ್ ತಗ೦ಡೋಗ್ ಕೊಡ್ಲಿಗೊಗಿ ಅ೦ದ ಯಾರೋವಾ. ಮತ್ತೊ೦ದ್ ಮರಿ ಹುಡಕದೇನ್ ಅಸ್ಟ ಅರ್ಜ೦ಟಿತ್ತಿಲ್ಲೆ ಯಾರಿಗುವ. ಆಗೆ೦ತ ಕೊನೆಕೊಯ್ಲೂ ಅಲ್ಲ ಗದ್ದೆಕಾಯ ಶ್ರಾಯನೂ ಅಲ್ಲ. ಯ೦ಗೆ ಮಾತ್ರ ಮನೆಜನ ಹೋದಸ್ಟೇ ದು:ಖ ಆತು. ತ್ವಾಟಕ್ ತಗ೦ಡೋಗಿ ಅಡಕೆ ಸಸಿಗೆ ಹೇಳಿ ಹೋದರ್ಶ ತೋಡೀಟ್ಟ ಗು೦ಡಿ ಖಾಲಿ ಇತ್ತ ಗರವು. ಅದರಲ್ಲೇ ಹುಗದು ಮಣ್ ಮುಚ್ಚಿಕ್ಕೆ ಕೊಡ್ಲಿಗ್ ಹೊತಾಕಿಕ್ ಬ೦ಜಿ ಅ೦ದಿ. ನಾಯಿ ದತ್ತಾತ್ರೆಯನ ವಾಹನ ಹೇಳತ. ನಾಗ್ರಾವು ಸತ್ರೆ ಅದಕೆ ಸ೦ಸ್ಕಾರ ಇದ್ದು. ನಾಯಿಗೆ ಇಲ್ಲೆ. ಹನ್ನೊ೦ದು, ಹನ್ನೆರಡು, ಹದಿಮೂರು, ಮಾಸಿಕ, ವರ್ಷಾ೦ತ, ಪತ೦ಗ, ಶ್ರಾದ್ಧ ಎಲ್ಲವ ಮನುಷ್ಯರಿಗೆ ಮಾತ್ರ. ವೈತರಣಿ ನದಿ ದಾಟದು ಕಸ್ಟ ಹೇಳಡಪ. ನಾಯಿ ಆ ನದಿ ದಾಟುವಸ್ಟು ಪಾಪ ಮಾಡಿರಾತಲಿ ದಾಟ ಪ್ರಸ೦ಗ ಬಪ್ಪದು?
ಅದ್ರ ಹುಗದ ಜಾಗಕ್ಕೆ ಒ೦ದು ಬಿಳೀ ದಾಸವಾಳ ಗೆಡ ನೆಟ್ಟಿಕ್ ಬ೦ದಿ. ಯಾರಿಗೂ ಹೇಳಲೋಜ್ನಿಲ್ಲೆ. ಪರಮಾತ್ಮ೦ಗೂ ಸುಬ್ಬಿ ಕ೦ಡ್ರೆ ಪ್ರೀತಿಯಾಗಿತ್ತಗರವು. ಎಲ್ಲರ ಮನೆ ದೇರ್ಪುಜಿಗುವಾ ಅದೇ ಬಿಳೀದಾಸಾಳ ಹೋಗಿ ಸೇರಿದ್ದು.
ಸುಬ್ಬಿಗೆ ಒ೦ದು ಸ೦ಸ್ಕಾರ ಮಾಡಲಾಜಿಲ್ಲೆ ಹೇಳ ಕೊರಗಿತ್ತು. ಭಗವ೦ತನೆಯ ಅದಕೆ ಸ೦ಸ್ಕಾರ ಮಾಡಿಕ್ಯ೦ಡ.
(*ಗುರ್ಖೆ: ಹುಲಿಯ ಜಾತಿಗೆ ಸೇರಿದ ಒ೦ದು ಕಾಡುಪ್ರಾಣಿ.ಹುಲಿಯಸ್ಟು ಬಲಶಾಲಿ ಅಲ್ಲ ದೊಡ್ಡದೂ ಅಲ್ಲ. ಬೆಕ್ಕಿಗಿ೦ತ ದೊಡ್ಡದು. ಹನ್ನೆರಡು: ಅ೦ತಿಮ ಸ೦ಸ್ಕಾರದ ಒ೦ದು ಭಾಗ) )

Subscribe to:
Comments (Atom)