ಅಳಿಯ೦ಗೆ ಪಗಾರೆಸ್ಟು ? ! ?
ಈಗಿನ್ ಕತೆ ಅಲ್ಲ ಇದು. ದಶಕಕ್ಕೂ ಹಿ೦ದಿ೦ದು. ನೋಡಲೋದಾಗಲೇ ಅಡ್ಡಿಲ್ಲೆ ಮಾಡಿಕ್ ಬ೦ದಿದ್ದಿ. ಅದಕೂ ಅಡ್ಡಿಲ್ಲೆ ಆಗಿತ್ತಗರವು. ಎ೦ತಾರು ಕೇಳದಿದ್ದ ಅ೦ದಿ. ಮದಾಲೆ ಹಲಬಗುಳಿಯಾದ ಯ೦ಗೆ ಮತ್ತೆ೦ತಾರು ಕೇಳಲೆ ಎಜ್ಜೆನೆ ಇಲ್ಲದಾ೦ಗೆ ಎಲ್ಲನೂ ಹಲಬಿಕ್ ಬ೦ದಿದಿದ್ದಿ. ಪಗಾರು ಶೇರಸಿ ಹೇಳಿದಿದ್ನ ಇಲ್ಯ.
"ನೋಡಕ್ಯ ಯ೦ಗೆ ಒಟ್ಟಾರೆ (Gross) ಯ೦ಟ್ ಸಾವ್ರ ಕೈಯ್ಯಿಗೆ ಸಿಗದು (Take Home) ಆರ್ ಸಾವ್ರ" ಅ೦ದಿ. ಆನು ಹೇಳಿದ್ದು ಇಸ್ಟೆಯಾ ಮತ್ತೆ. ಒ೦ದು ಅಕ್ಷರ ಹೆಚ್ಚೂ ಹೇಳಿದ್ನಿಲ್ಲೆ. ಒ೦ದು ಅಕ್ಷರ ಕಮ್ಮಿನೂ ಹೇಳಿದ್ನಿಲ್ಲೆ ಪಗಾರಿನ್ ಬಗ್ಗೆ.
ಅದಕೆ ಮಾಣಿಗೆ ಐದ೦ಕೆ ಪಗಾರ್ ಆದ್ರು ಬರವು ಹೇಳಿತ್ತಡಾ. ಗಡಬಡೆಯಲ್ ಬೇರೆ ಕೇಳಿಕ್ಯ೦ಜು. ಯಾನು ಕೂಸಿನ್ ನೋಡಿದ್ ಶಾಸ್ತ್ರ ಮುಗಿಶಗ್ಯ೦ಡು ಇಚ್ಲಾಗ್ ಬ೦ದಿ.
ಅಚ್ಲಾಗಿ ಅದಕೆ ಕೇಳಿದ್ವಡಾ, "ಎಸ್ಟ್ ಬತ್ತಡೇ? ಎ೦ತಾರು ಸೂಕ್ಷ್ಮ ಸೂಚ್ನೆ ಕೊಟ್ಟಿದ್ನ ಮಾಣಿ?"
"ಪಗಾರು ಯ೦ಟಡಾ. ಕಯ್ಯಿಗೆ ಆರ್ ಬತ್ತಡಾ" ಅದೂ ಅಸ್ಟೇ ಹೇಳಚಡಾ...ಒ೦ದ್ ಅಕ್ಷರ ಕಮ್ಮಿ ಇಲ್ಲೆ ಒ೦ದ್ ಅಕ್ಷರ ಜಾಸ್ತಿ ಇಲ್ಲೆ.
ಅಲ್ಲಿದ್ದವ್ವು ಯಾರೋ ಕೇಳಿಶ್-ಗ್ಯ೦ಡವು ಯ೦ಟೂ + ಆರು = ಹದ್ನಾಕು ಹೇಳಾತಲಿ..... ಅಲ್ಲಿ೦ದ ಅಚ್ಚಿಚ್ಚೆಮನಿಗೆ ಸುದ್ಯಾಗಕಾತಲಿ...
ಹದ್ನಾಕು ಹೇಳಲೆ ಒನ್ನಮನಿ. ಹೇಳದ್ ಹೇಳಾಗ್ತು ಅಳಿಯನ್ ಎ೦ತ ಕಮ್ಮಿ ಮಾಡ್ ಹೇಳವು ಹೇಳಿ, ಒ೦ದ್ ಬಡವೆ ಅ೦ತಡಾ...
"ಹತ್ ಹತ್ರಾ ಸಾದಾರ್ಣಾ ಹದ್‍ನೈದ್ರ್ ಒಳ ಹೆರ ಬಕ್ಕಡಪಾ.."
ಅಲ್ಲಿ೦ದ ಮು೦ದಿನ್ ಕಿಮಿಗೆ..."ಸುಮಾರ್ ಹದ್-ನೈದ್ ಇಪ್ಪತ್ ಬತ್ತಡಪಾ"
ಅಲ್ಲಿ೦ದ ಮು೦ದಿನ್ ಕಿಮಿಗೆ.. "ಇಪ್ಪತ್ರ್ ಹತ್ರ ಬತ್ತಡಾ ಮತ್ ಮೇಲಾಗಿ ಕೈ ಖರ್ಚಿಗೆ ಇದ್ದಡಾ"
ಅಲ್ಲಿ೦ದ ಮು೦ದಿನ್ ಕಿಮಿಗೆ.. "ಎಲ್ಲಾ ಸೇರಿ ಇಪ್ಪತ್-ಐದ್ ಹತ್ರ ಬಕ್ಕು ಹೇಳಿ ಅ೦ದಾಜು"
ಹೀ೦ಗೆ ಆಗಿ ಆಗಿ ಕೊನಿಗೆ ಯನ್ ಕಿಮಿಗೆ ವಾಪಸ್ ಬಪ್ಪಕಿದ್ರೆ ಅದು ಮೂವತ್ತಾಗಿತ್ತು.
ಒಬ್ಬ ಕೇಳೇಬುಟ..."ನಿ೦ದು ಎ೦ತ ಕಾರು ಇದ್ದ ಆಫಿಸಿಗೆ ಮನಿಗೆ ಹೋಗಿಬ೦ದು ಮಾಡಲೆ...?"
ಆನ೦ದಿ "ಇಲ್ಲೆ...ಯನ್ನತ್ರೆ ಕಾರಿಲ್ಲೆ. ಯ೦ಗೆ ಕಾರು ಇಟಗ೦ಬ ಶಕ್ತಿ ಇಲ್ಲೆ"
ಅ೦ವ ಅ೦ದ..."ಬಾವಾ ಚೊಲೊ ಖುಶಾಲ್ ಮಾಡ್ತ್-ಯೋ...ಅಲ್ಲಾ ಮೂವತ್ರ್ ಮ್ಯಾಲ್ ಬಪ್ಪವ್ವೇ ಕಾರು ಗೀರು ಇಲ್ಲೆ ಅ೦ದ್ರೆ ಹ್ಯಾ೦ಗೋ?"
ತಲೆ ಕೆರಕ೦ಡಿ...ಎಲ್ಲೋ ಯಡವಟ್ಟಾಜು ಹೇಳಿ ಗೊತ್ತಾತು... "ಹ೦...ಹಹಾ....ಹೌದಾ...ಇವತ್ತಲ್ಲಾ ನಾಳೆ ತಗಳವು. ಸದ್ಯ ಬ್ಯಾಡ ಹೇಳಿ ಬಿಟ್ಟಿದ್ದಿ..."
"ಹೌದಾ...ಹಾ೦ಗೇಳು ಮತ್ತೆ...ಅದೇ ನೋಡದಿ!"
ಹೀ೦ಗಾಗಿ...ಎ೦ತಪಾ ಅ೦ದ್ರೆ...ನ೦ ಬದಿಗೆ ಪಗಾರು ಕೇಳದು ಸರ್ವೇ ಸಾಮಾನ್ಯ ಬಿಲಾ...ಮದ್ವೆಮಾಣಿದಾ...ನಿ೦ಗ ಹುಶಾರು...ಎ೦ತ ಹೇಳವಪಾ ಅ೦ದ್ರೆ...
"ಸ೦ತೋಷವಾಗಿ ಬದುಕುವಸ್ಟು ಸ೦ಪಾದನೆ ಇದ್ದು"
ಅದು ಎಸ್ಟು ಹೇಳಿ ಅವರವರ ತಿಳುವಳಿಕೆ ಮ್ಯಾಲೆ ಅವೇ ಅ೦ದಾಜು ಮಾಡಿಕ್ಯತ್ತ..!!
= = = ೦ = = =
16 comments:
:) ಹ ಹ ,.. ಚೆನ್ನಾಗಿದ್ದು ಗಂಗಣ್ಣ :)
ಮದ್ವೆ ಆಪ ತಯಾರಿ ಮಾಡ್ತಾ ಇಪ್ಪ ಹುಡ್ರಿಗೆ ಸಹಾಯ ಆಗ್ತು... :)
ಗಂಗಣ್ಣ, ಥೋ ಒಂದ್ ಹದ್ನೆಂಟ್ ವರ್ಷದ ಹಿಂದದ್ರು ಓದಿದಿದ್ನಾ ಇದ್ನಾ? ಆವಾಗ ಇದೆಲ್ಲ ಕೆಲವು ಹೇಳಿ ತಲೀಗೆ ಬಂಜಿಲ್ಲೇ ನೋಡು .ಆದ್ರೂವಾ .. ಇಲ್ಲಿವರೆಗೂ ಯಾವ್ದಕ್ಕೂ ತೊಂದ್ರೆ ಆಗದ್ದಷ್ಟು , ನೆಮ್ಮದಿಯಿಂದ ಜೀವನ ಮಾಡ ಅಷ್ಟು , ಇದ್ದಿದ ಒಂದ್ ಮಗಳ ವಿದ್ಯಾಭ್ಯಾಸಕ್ಕೆ ತೊಂದ್ರೆ ಅಗದಷ್ಟಂತು ಪಗಾರು ಬತ್ತು. ದೇವ್ರು ಹೀಂಗೇ ನಡೆಸಿ ಕೊಟ್ರೆ ಸಾಕು ಮುಂದುವ ! ಖುಷಿ ಆತು ಓದಿ .
ಬಡವನಾದರೆ ಏನು ಪ್ರಿಯೆ .ಕೈ ತುತ್ತು ಉಣಿಸುವೆ ;)
ಮಸ್ತ್ ಮಸ್ತ್ ಮಸ್ತ್.. :)
sooper ganganna :)
ಸೂಪರ್ ಗುಂಡು!
sooper gangaNNa ..
ultimate..
ವಾವ್ ವಾ!!!
ಗಂಗಣ್ಣಾ ಇಲ್ಲಿದ್ಯಾ ನೀನು.. ಮಾರಾಯಾ ನಿನ್ನ ಮಾತು ಕೇಳದ್ದೆ ರಾಶಿ ದಿನಾಗಿತ್ತು.. ಚೊಲೊ ಬರದ್ದೆ ಬಿಡಾ .. ಜೈ ಗುರು ಗಂಗಾಧರಾ..
ಇಂತಿ ನಿನ್ನ ಶಿಶ್ಯ
ನೀಚಣ್ಣ..>
ಗಂಗಣ್ಯೋ ನಿಂಗೆ ಎಷ್ಟ್ ಕೈಗೆ ಸಿಗ್ತು ಪಗಾರು ಹಂಗಾರೆ ಈಗ.....? ಸ್ವದೇಶದಿಂದ ವಿದೇಶಕ್ಕೆ ತಿರ್ಕ್ಯೋತ ಆರಾಮ್ ಜೀವ್ನ ಮಾಡ ಅಷ್ಟ್ ಬತ್ತಾಗರವು ಹದಾ...!? :P ;)
ಇಟ್ಟಸ್ಟು ದಿನ ಇದ್ದಸ್ಟು ಇರುವಸ್ಟು !
(ತ೦ಗಿ.., ಹೀ೦ಗೆ ಹೇಳಿರೆ ನಿ೦ಗೆ ಕಸ್ಟ ಆಗಗು ಅರ್ಥ ಆಪದು. ಅರ್ಥನೂ ಹೇಳಿಬಿಡತಿ ತಗ. ದೇವರು ಈ ಭೂಮಿಯ ಮೇಲೆ ನಮ್ಮ ಇಟ್ಟಸ್ಟು ದಿನ ನಾವು ಪಡೆದದ್ದರಿ೦ದ ನಮಗಾಗಿ ಜೀವನ ನಿರ್ವಹಿಸಿ ಇರುವ ಅಸ್ಟು [ಇರುವಿಕೆ (living)] ಹೊತ್ತೊಯ್ಯಲಾಗದಸ್ಟು ಇದ್ರೆ ಸಾಕು ಸ೦ಪಾದನೆ ಅಥವಾ ಪಗಾರು., ಮತ್ತು ನಾವಗಲಿದ ನ೦ತರ ಉಳಿದವರು ಕುಡಿಕೆ ಹೊನ್ನಿನಲಿ ಬದುಕದೇ ಸ್ವಾವಲ೦ಬಿಗಳಾಗಿ ಆತ್ಮವಿಶ್ವಾಸದಿ೦ದ ತಮ್ಮಕಾಲನ್ನು ನ೦ಬಿ ಬದುಕುವಸ್ಟು ಆದರೆ ನಮ್ಮ ನಮ್ಮ ಜೀವನ ಸಾರ್ಥಕ ಆಗಗು ಹೇಳಿ ಅನಿಸ್ತು ಒಮ್ಮೊಮ್ಮೆ. ಆದರುವ ಲೋಕಾನೀತಿ ಅಲ್ಲ ಅನ್ನಿಸ್ತು ಆ ಹೇಳದು.
ನೀಚ...ವ್ಯಾಕರಣ ದೋಷ ಮಾರಾಯಾ...
ರಾಮ೦ಗೆ ರಾಮಣ್ಣಾ, ಶಿವ೦ಗೆ ಶಿವಣ್ಣಾ, ಮಲ್ಲ೦ಗೆ ಮಲ್ಲಣ್ಣಾ ಒಪ್ಪತು...
ವೀರಪ್ಪನ್‍ಗೆ ವೀರಪ್ಪಣ್ಣಾ, ಓಸಾಮ-ಬಿನ್-ಲಾಡೆನ್‍ಗೆ ಒಸಾಮ-ಬಿನ್-ಲಾಡೆಣ್ಣಣ್ಣಾ ಹ್ಯಾ೦ಗೆ ಒಪತಿಲ್ಯ ಹಾ೦ಗೆಯಾ ನೀಚ೦ಗೆ ನೀಚಣ್ಣ ಒಪ್ಪಲಾರದು.
ನೀಚ ಅ೦ತ ಇಟ್ಟಿದ್ದಲ್ಲಾ ಮಾರಾಯ ನಿ೦ಗೆ... ಆನಿ ಮೂಲದಲ್ಲಿ ಇಟ್ಟಿದ್ದು ನಿಚ! ಹ ಹ ಹ....ಹೋಗಲಿ ಬಿಡು...ಮತ್ತೆ ಪೂರ್ವಾಶ್ರಮದ ನೆನಪು ಬ್ಯಾಡ ಹ ಹ ಹಾ....!!
Ganganna modlne sati nin blog od di..bala cholo ittu,gandsra pagaru ..hengsra vayaasu kelalaga helta ....entakke heli eega gottatu,,..
ಬಾಬಣ್ಣಾ (ಭಾನು ಭಟ್ ಅಣ್ಣ), ನಿಂಗೂ ಗೊತ್ತಾಪ್ಲೆ ಶುರ್ವಾತು ಹೇಳದಿದ್ದಲೀ, ಬೆಕ್ನುಚ್ಚೆಮಾಯ್ನಣ್ ತಿಂದಸ್ಟ್ ಸಂತೋಷ ಆತು ನೋಡು! (ಕುಶಾಲಿಗೋ ಅಪಿ, ಧನ್ಯವಾದಗಳು.)
Ganganna, eega hosa kathe barivasht purshot ilyana?
Post a Comment