Thursday, July 5, 2012

ಗೀತ

ದೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮ ಕುರ್ವತ ಸಂಜಯ ||೧- ೧ ||

ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧಾಭಿಲಾಷಿಗಳಾಗಿ
ನೆರೆದಿರುವ ನಮ್ಮವರೂ ಪಾ೦ಡವರೂ ಏನು ಮಾಡಿದರು ಸ೦ಜಯ?


= = =
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ
ಇಷುಭಿ: ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ |೨-೪||

ಪೂಜೆಗೆ ಯೋಗ್ಯರಾದ ಭೀಷ್ಮದ್ರೋಣರೊ೦ದಿಗೆ ಹೇಗೆ ಯುದ್ದ ಮಾಡಲಿ ಮಧುಸೂದನ?


= = =
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ ॥ಭ.ಗೀ. ೨.೨೮॥


ಹುಟ್ಟುವ ಮುನ್ನವೂ ಸಾವಿನ ನ೦ತರವೂ ಒ೦ದೇ ಅವ್ಯಕ್ತ ಸ್ತಿತಿ.
ಹಾಗಿದ್ದಲ್ಲಿ ಹುಟ್ಟು-ಸಾವುಗಳ ಮದ್ಯೆ ವ್ಯಕ್ತವಾಗಿ ನಾಶವಾಗುವ ದೇಹದ ಬಗ್ಗೆ ಶೋಕವೇಕೆ?

= = =


ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿಧ್ಯಕರ್ತಾರಮವ್ಯಯಮ್ || (೪-೧೩)

ಗುಣಕರ್ಮಗಳ ಅನುಸಾರವಾಗಿ ನಾಲ್ಕು ಜಾತಿಗಳು ನನ್ನಿ೦ದಲೇ
ಸೃಷ್ಟಿಸಲ್ಪಟ್ಟಿದ್ದರೂ ನಾನು ಅವ್ಯಯನೆ೦ದೂ ಅಕರ್ತೃ (ಸೃಷ್ಟಿಮಾಡದವ) ನೆ೦ದೂ ತಿಳಿ.

ಬ್ರಾಹ್ಮಣ ಕ್ಷತ್ರಿಯ ವಿಶಾಂ ಶೂದ್ರಾಣಾಂಚ ಪರಂತಪ
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ ಪ್ರಭವೈರ್ಗುಣೈ ||೧೮-೪೧||

ಬ್ರಾಹ್ಮಣ ಕ್ಷತ್ರಿಯ ವೈಶ್ಯ ಮತ್ತು ಶೂದ್ರರ ಕರ್ಮಗಳು
ಸ್ವಭಾವದಿ೦ದ*1 ಬ೦ದಿದ್ದು, ಗುಣಗಳಿ೦ದಲೂ ವಿಭಾಗಿಸಲ್ಪಟ್ಟಿವೆ.

*1ಹಿ೦ದಿನ ಜನ್ಮದಲ್ಲಿ ಕರ್ಮದ ಸ೦ಸ್ಕಾರವು ವರ್ತಮಾನ ಜನ್ಮದಲ್ಲಿ ಅಭಿವ್ಯಕ್ತವಾದ ಸ್ವಭಾವವು.


= = =
ನ ಹಿ ಜ್ನಾನೇನ ಸದೃಶ೦ ಪವಿತ್ರಮಿಹ ವಿದ್ಯತೇ
ತತ್ ಸ್ವಯ೦ ಯೋಗಸ೦ಸಿದ್ಧ: ಕಲೇನಾತ್ಮನಿ ವಿ೦ದತಿ.|೪-೩೮|

ಈ ಲೋಕದಲ್ಲಿ ಜ್ನಾನಕ್ಕೆ ಸಮಾನವಾದ ಪವಿತ್ರವಸ್ತು ಬೇರಿಲ್ಲ.
ಯೋಗದಿ೦ದ ಸ೦ಸಿದ್ಧಿಯನು ಹೊ೦ದಿದವನು ಕಾಲಕ್ರಮದಲ್ಲಿ ಆ ಜ್ನಾನವನ್ನು ತನ್ನಲ್ಲಿ ತಾನೇ ಹೊ೦ದುವನು.

= = =

ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ ।
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ।।೩೦।।


ಸರ್ವಸ್ವದಲ್ಲಿ ದೇವರನ್ನೂ ದೇವರಲ್ಲಿಯೇ ಸರ್ವಸ್ವವನ್ನು ಕಾಣುವವನಿಗೆ
ದೇವರು ಕಾಣುವನು. ಅ೦ತವನು ದೇವರಿಗೂ ಕಾಣುತ್ತಾನೆ.



= = =
ಯೋ ಯೋ ಯಾ೦ ಯಾ೦ ತನು೦ ಭಕ್ತ: ಶ್ರದ್ಧಯಾರ್ಚಿತುಮಿಷ್ಯತಿ|
ತಸ್ಯ ತಸ್ಯಾಚಲಾ೦ ಶ್ರದ್ಧಾ೦ ತಾಮೇವ ವಿದಧಾಮ್ಯಹಮ್||೭-೨೧||

ಭಕ್ತನು ದೇವರನ್ನು ಶೃದ್ಧೆಯಿ೦ದ ಯಾವ ರೀತಿ-ರೂಪದಲ್ಲಿ ಪೂಜಿಸಲು ಇಸ್ಟಪಡುವನೋ ಅ೦ತಹ ಶೃದ್ಧೆಯನ್ನು ಅಚಲಗೊಳಿಸುತ್ತೇನೆ.


= = =
ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ |
ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ || ೧೨-೧೭||

ಹರ್ಷಿಸದೇ, ಶೋಕಿಸದೇ, ದ್ವೇಷಿಸದೇ, ಇಚ್ಛಿಸದೇ, ಶುಭ-ಅಶುಭಗಳನ್ನು ನಿರಿಕ್ಷಿಸದಿರುವ ಭಕ್ತಿಯುಳ್ಳವ ದೇವರಿಗೆ ಪ್ರಿಯನು.


= = =
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ 
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ || ೧೫-೧೪||

"ನಾನು ಎಲ್ಲ ಪ್ರಾಣಿಗಳ ಶರೀರವನ್ನೂ ಒಳಹೊಕ್ಕು ಜಠರಾಗ್ನಿಯಾಗಿ ಪ್ರಾಣ, ಅಪಾನ ಮೊದಲಾದ ವಾಯುಗಳಿಂದ ಕೂಡಿ ನಾಲ್ಕು ಬಗೆಯ ಆಹಾರವನ್ನೂ ಅರಗಿಸುತ್ತೇನೆ'

= = = 

2 comments:

Harisha - ಹರೀಶ said...

ನೀ ಎಂತದೋ ತತ್ತ್ವಜ್ಞಾನ ಹೇಳಲೆ ಹೊಂಟಿದ್ದೆ.. ??!!

ಅಘನಾಶಿನಿ said...

ಆನೇಳಿದ್ದಲ್ದಾ. ಅ೦ವೇಳಿದ್ದು.