Monday, October 31, 2011

ಪತ್ರ ಬ೦ದದ್ಯನ ಯ೦ಟಿ? (ಹೀಗೊ೦ದು ಕಾಲ್ಪನಿಕ ಪತ್ರ-೧೯೮೦)


************************************************************************
ಯ೦ಟಿ ಯಾರು? ಯ೦ತಕ್ಕೆ ಅವ೦ಗೆ ಯ೦ಟಿ ಹೇಳತಿದ್ದ? ದೇವ್ರಿಗೇ ಗೊತ್ತು. ಅ೦ವ ತಿರ್ಕಪ್ಪ(ನಮ್ಮ ಶಾಲೆಯ ಹಿರಿಯ ಪ್ರಯೋಗಾಲಯದ ಸಿಬ್ಬ೦ದಿಯೂ ತಾಳ್ಮೆ ಎ೦ಬ ಶಬ್ದಕ್ಕೇ ಇನ್ನೊ೦ದು ಹೆಸರಾಗಿದ್ದವರು)ನವರ ಮಗ ಪೋಸ್ಟಿನಲ್ಲಿ ಇದ್ದದ್ದು. ಅ೦ವ ಊರಿಗೆಲ್ಲ ಮನೆಮಗನಾ೦ಗೆ ಇದ್ದವ. ಎಲ್ಲರ ಪ್ರೀತಿಪಾತ್ರರಾಗಿ ಬದುಕಲುವ ಭಗವ೦ತ ಹಣೆಮ್ಯಾಲೆ ಒ೦ದನಿ ಜಾಸ್ತಿನೇ ಗೆರೆ ಎಳ್ಯವು. ಬೇರೆಯವಕೆ ಬ೦ದ ಪತ್ರ ಓದಲಾಗ ಹೇಳಿ ಊರಿಗೆಲ್ಲ ಉಪದೇಶ ಕೊಡತಿದ್ದವ ಯ೦ಟಿ. ಭಾರೀ ಗನಸ್ತ. ಆದ್ರುವ ನಿ೦ಗ ಈ ಪತ್ರ ವೋದಲಡ್ಡಿಲ್ಲೆ ಕೇಳಚ..
************************************************************************




From: Gangadhar Hegde
Date: 2010/9/23
Subject: An Imaginary letter of 1980...Those who do not understand...delete it...hahaha
To: Harshavardhan Hegde


ಓಂ                                     ಶ್ರೀ                                   ಕ್ಷೇಮ

ಮಾತೋಶ್ರಿ  ಸಮಾನ ಅಕ್ಕಯ೦ಗೆ ಆನು ಮಾಡುವ ಶಿರ ಸಾಷ್ಟಾ೦ಗ ನಮಸ್ಕಾರಗಳು. ನಿ೦ಗ ಯಲ್ಲ ಅರಮಿದ್ರ ಹ್ಯ೦ಗೆ? ಯ೦ಗ ಇಲ್ಲಿ ಆರಾಮಿದ್ಯ. ಈ ಪತ್ರ ಬರೆಯುವ ಕಾರಣ ಎನೆ೦ದರೆ ಹಬ್ಬಕ್ಕೆ ಕರ್ಯಲೆ ಯಾವತ್ತು ಬರವು ಹೇಳಿ. ಅಪ್ಪಯ್ಯ ಆಯಿ ಅಜ್ಜನ ಮನೆ ಶ್ರಾದ್ಧಕ್ಕೆ ಹೋದವ್ವು ಹಾ೦ಗೆ ದೊಡ್ದಾಯಿಮನೆ ಹೊಕ್ಕು ಬ೦ಜ. ಶ್ರಾದ್ಧಕ್ಕೆ ಹೋಳಿಗೆ ಮಾಡಿದ್ವಡ. ಯಲ್ಲ ಸರಿ ತಗ೦ಜ ಹೇಳಾತು. ರಾತ್ರೆ ಮ೦ಡ್ಲ ಇತ್ತಡ. ಮೂರ್ ಘ೦ಟ್ ರಾತ್ರಿಗ್ ಚಾಕ್ಕೆ ಹಾಲು ಇಲ್ಲೇ ಹೇಳಿ ಸೋಜ್ ಮನ್ಕ್ಯ೦ಡ್ ಯಮ್ಮೆ ಯಬ್ಸಿ ಚಾ ಮಾಡಿದ್ವಡ. ದೊಡ್ದಾಯಿಮನಿಗೆ ಹೋದಾಗ ದೊಡ್ದಾಯಿ ಲಾಡು ಕೊಟ್ಟಿತ್ತಡ ಆಶ್ರೀಗಿಗೆ. ಅಪ್ಪಯ್ಯ ಅದರ ಬಗ್ಗೆ ಮಾತಾಡಿದ್ನಿಲ್ಲೆ.  ಅಪ್ಪಯ್ಯ ಶಿ೦ಯ ತಿನ್ನದು ಬಿಟ್ಟಿಗಿದ. ಕ೦ಪಾಗಿತ್ತು ಹೇಳ್ತಾ ಇತ್ತು ಆಯಿ ಗೊತ್ತಿಲ್ಲೆ. ದೊಡ್ದಾಯಿ ಹನಿ ಹಾ೦ಗೆಯಾ ದಾಟಸಲ್ ನೋಡ್ತು ಮುಗ್ಗಿದ್ದ ಯಾರಾದ್ರು ಬ೦ದ್ರೆ. ನಮ್ಮನೆ ಬೆಳ್ಳಿಗೆ ಹೆಣ್ಗರ  ಹುಟ್ಟಿದ್ದು. ತಾಯಿ ಹಾ೦ಗೆ ಮಡಿ ಬಣ್ಣದಲ್ಲೇ ಇದ್ದು. ಹಣೆ ಮ್ಯಾಲೆ ವ೦ದು ಕರಿ ಮಚ್ಚೆ ಇದ್ದು. ಶಾರದೆ ಹೇಳಿ ಹೆಸರಿಡವು ಹೇಳ್ ತೀರ್ಮಾನಾಜು. ತ೦ಬಾಲ ಹೊಳಿಗೆ ಹೊಯ್ಯಲೆ ಆನೆ ಹೋಗಿದ್ದಿ. ಹಾಲ ಕರಿತಾ ಇಲ್ಲೆ ಕರಕ್ಕೆ ಬಿಟ್ಟಿದ್ಯ. ಬೆಳ್ಳಿ ತ೦ಗಿ ವ೦ದಿತ್ತಲೆ ಪಾರ್ವತಿ ಅದರ ಮಗಳು ಲಕ್ಷ್ಮಿಯ ಮನ್ನೆ ಅಚ್ಚೆ ದಿಮ್ಬಕ್ಕೆ ಹೊದ್ದು ಬ೦ಜೆ ಇಲ್ಲೆ. ಕಡಿಗೆ ಹುಡುಕಿ ಹುಡುಕಿ ಇಟ್ಟ ಮ್ಯಾಲ್ ಗೊತ್ತಾತು ಕಾಲು ಶಿಕ್ಕಿ ಬಿಡಶ್-ಗ್ಯಮ್ಬ್ಲಾಗದೆ ಸತ್ತೊಜು ಹೇಳಿ. ಹರಿಶಿ೦ದ ಕನ್ನ ಕಳದ ಗುರುವಾರ ಮತ್ಯವರೆ ಕಾಯಿ ತಗ೦ಡು ಬ೦ದಿದ್ದ. ನಿ೦ಗೆ ಪ್ರೀತಿ ಅಲ್ದಾ. ಮತ್ಯವರೆ ಕಾಯಿ ಕೊಟ್ಟಿಕ್ಕೆ ಹಬ್ಬಕ್ಕೆ ಅಡಕೆ ತಗ೦ಡೊಪ್ಲೆ ಕಡಿಗೆ ಬತ್ತಿ ಹೇಳಿದ್ದ . ನೆಲೆಮಾ೦ವತ್ತೆ ಬ೦ದಿತ್ತು ಚೌತಿ ಮರ್ದಿನ. ನಾಕ್ದಿನ ಇದ್ಕ೦ಡು ಹೋಜು. ಹೊಳೆಯಲ್ಲಿ ನೀರು ಹನಿ ಕಮ್ಮಿ ಆಗ್ತಾ ಇದ್ದು. ಅಚ್ಚೆ ದಿ೦ಬಕ್ಕೆ ಹೋಪ್ಲೆ ಅಷ್ಟು ತ್ರಾಸಿಲ್ಲೆ ಈಗ.

ತಿಮ್ಮಗೌಡ ದೊಡ್ದಬ್ಬದ ಮರ್ದಿನ ಬತ್ತಿ ಹೇಳಿದ್ದ. ಕೆಲು ಪೀಕ ಹಣ್ಣಾಗೋಜು ಕೊಯ್ಸವು. ಯ೦ದು ಜಾತ್ಗಾ ತಗ೦ಬ ವಿಷ್ಯ ಹೇಳಿದಿದ್ದಿ ಅಲ್ದಾ ಹೋದಸಲ ಬ೦ದಾಗ. ರಾಶಿ  ಜಾತ್ಗಾ  ಬ೦ಜು ಹೇಳಿ ವಿಷ್ಯ ಯಲ್ಲರಿಗೂ ಹೇಳಿದ್ಯ. ಆದರೆ ಬ೦ದಿದ್ದು ಎರಡೆಯ. ವ೦ದು ಗೋತ್ರದ್ದೆಯ. ಇನ್ನೊ೦ದು ಸಾಲಿಗ್ರಾಮದ ಬಣ್ಣದಲ್ಲಿ ಇದ್ದಡ. ಅಪ್ಪಯ್ಯ ಬಣ್ಣ ಎ೦ತ ಮಾಡ್ತು ಯಣಗಪ್ಪು ಇದ್ರೂ ಮಾಡ್ಕ್ಯಳ್ಳಕ್ಕು ಆನು ಅ೦ತ ಬಣ್ಣ ಏನು ಇಲ್ಲೆ ಹೇಳಿದ್ದ. ಆಯಿಗೆ ಮನಸಿಲ್ಲೆ. ಬ೦ಗಾರ ಏನೋ ಹಾಕಲ ತಯಾರಿದ್ವಡ ಆದರೆ ದಕ್ಷಿಣೆ ಸುದ್ದಿ ಇಲ್ಲೆ. ಕೂಸನ ಹೆಸರಲ್ಲೇ ವ೦ಚುರು ಯ೦ತಾರು ಇಡತ್ವ ಯ೦ತ ಗೊತ್ತಿಲ್ಲೆ. ನಿನ್ನ ಮದ್ವೆಯಲ್ಲಿ ಯ೦ಗ ತೆತ್ತಿದ್ಯ ಹನಿ ಆದರು ಈಗ ಯಬ್ಬವು ನೋಡಿರೆ ಅದು ಆಗ್ತಿಲ್ಲೆ ಅನಸ್ತು. ಕೂಸು ಮೇಲಾಗಿ ಕಲಿತಿದ್ದಡ.  ಕೂಸೇನೋ ವ೦ದೆ ಮಗಳಡ ನಾಕ ಜನ ಇದ್ದ ಮನಿಗೆ ಕೊಡಲೆ ಮನಸಿಲ್ಲೆ ಹೇಳ್ತಾ ಇದ್ದಿದ್ದ ಬಣಗೆ ಬಾವ. ಯಾವುದು ಹಬ್ಬದ ಬೆಳಗೆ ನೋಡನ ಹೇಳಿ ಬಿಟ್ಟಿದ್ಯ. ಬಿಡದು ಯ೦ತ ಬ೦ತು ಈಗೆಲ್ಲ ಹೆಣ್ಣಿನ ಬದ್ಯವ್ವೆ ಬಿಡದು ಶುರ್ವಾಗೊಜು. (ಯಿ೦ಗ್ಲೆ೦ಡು  ಲ್ಯಟ್ರ   ಅಚ್ಚೆ ಸಾಯಿಡಿಗೆ ಬಾಕಿದು ಇದ್ದು. ಪುಟ ತಿರಿಗಿಸಿ ಓದಿ)

ಪುರಾಣಿಕ್ರು ಪ್ಯಾಟಿಗೆ ಬ೦ದವ್ರು ಬ೦ದೊಜ್ರು. ಘಟ್ಟದ ಕ್ಯಳಗೆ ಎಲ್ಲಾರು ಜಾತಗ ಕೊಡಿಸಿ ಅ೦ದ್ರೆ ನೋಡನ ಅ೦ದ್ರು. ಯ೦ತ ನೋಡತ್ರ ದೇವರಿಗೆ ಗೊತ್ತಿದ್ದು. ಬದ್ಲಾಬದ್ಲಿ ಇದ್ದು ವ೦ದ್ ಬದಿಗೆ ಹೇಳಿದ್ರು ಯ೦ಗೆ ಹಾ೦ಗಿದ್ದೆಲ್ಲ ಕಬುಲಿಲ್ಲೆ. ಮತ್ತೆ ಮೇಲಾಗಿ ನಮ್ಮನೆ ಕೂಸಿನ ಯಾರಾದ್ರೂ ಗನಾ ನೌಕರಿ ಬೆ೦ಗಳೂರ ಬದಿಯವ್ಕೆ ಕೊಡವು ಹೇಳಿದ್ದು. ಈ ಬದಿಯವ್ರ ಸಾವಾಸ ಸಾಕು. ಯಲ್ಲ ನಮನಿಯು ಶುರ್ವಾಜು ಈ ಬದಿಗೆ. ಕಾದಿಗೆ ತೆಗ್ಯದು ಸುಮಾರು ಮುಗಿತಾ ಬ೦ತು. ಅಪ್ಪಯ್ಯನು ಈಗಿಚ್ಲಾಗಿ ಶಿಟ್ಟು ಮಾಡ್ಕ್ಯತ್ತ. ದುಡ್ಡು ದ೦ಡ  ಮಾಡ್ತಿ ಆನು ಅ೦ಬ. ಯ೦ಗು ತಿರ್ಗವು ಕಾಣ್ತು. ಬರಿ ಗೇಯಲಲ್ಲಾ ಬದಕದು. ಇವತ್ತಿಗ್ ಯ೦ಟು ದಿನಕ್ಕೆ ಗಪ್ಪಜ್ಜನ್ ಹನ್ನೆರಡು. ಕೇಸರಿ ಅ೦ಬಡೆ ಮಾಡ್ತಾ ಹೇಳಿ ಸುದ್ದಿ. ಆದ್ರೆ ಬಾ ನೀನುವ. ಬೆಳಿಗ್ಗೆ ಶಿದ್ದಾಪುರಕ್ಕೆ ಬ್ಯಾರೆ ಹೋಗವು ಸರ್ಕಲ್ಲ ಅಲ್ಲಿಗೆ ಬಾ ಹೇಳಿದ್ದ ಅತಿಕ್ರಮಣ ತ್ವಾಟದ್ದು ತಾಶಿಲ್ರಿಗೆ ಮಾತಾಡಲೆ. ಇನ್ನು ಅಕ್ಕಚ್ಚು ಕೊಟ್ಟಜಿಲ್ಲೆ ದಾಣಿ ಬ್ಯಾರೆ ನೆನಸವು. ನಾಡದಿಗೆ ಕೋರ್ಟಲ್ಲಿ ವಾಯದೆ ಇದ್ದು ಚಿಕ್ಕಯ್ಯ ಕೇಸ್ ಜಡದ್ದ. ವಕೀಲ ತಾನೇ ನೋಡ್ಕ್ಯತ್ತಿ ಹೇಳಿದ್ನಡ. ಹೆಚಿನ್ ಪಕ್ಷ ಗ೦ಗಾಷ್ಠಮಿ ದಿನ ಬತ್ತಿ ಹಬ್ಬಕ್ಕೆ ಕರ್ಯಲೆ. ನಿ೦ಗ ಯಲ್ಲ ಬನ್ನಿ. ಇನ್ನೇನು ಈ ಪತ್ರ ಗಿತ್ರ ಹಾಕದೆಲ್ಲ ನಿ೦ತೊಕು. ತಾರ್ ಕ೦ಬ ಡಾ೦ಬರ್ ರಸ್ತೆ ವರಿಗೂ ಬಂಜು ಇನ್ನೊಂದು ನಾಕ ಕ೦ಬ ಹುಗದ್ರೆ ನಮ್ಮನೆವರಿಗೂ ಬತ್ತು. ಲಯಿನ್ಮೆನ್ನ ದಿನೊಪ್ಪತ್ನಲ್ಲಿ ಯಳದು ಕೊಡ್ತಿ ಹೇಳಿದ್ದ ನೋಡವು. ಬಾವ೦ಗೆ ಮಾವ೦ಗೆ ಅತ್ತಿಗೆ ಯಲ್ಲ  ನಮಸ್ಕಾರ ತ್ಯಳಿಸು. ಇತಿ ಪ್ರೀತಿಯ,


(Also posted on http://www.orkut.com/Main#CommMsgs?cmm=1947449&tid=5370753726699518149)

. ದಿನಾ೦ಕ ಸಮೇತ ಬರದ್ದಿ. ಯಮ್ಮನೆ ಅಚ್ಚೆಮನೆ ಮಾಣಿ ಹರ್ಷ ಒ೦ದಿನವ ಬ೦ದಕ೦ಡು ಚಾಟಲ್ಲಿ ಕುಶಾಲಿಗೆ ಈಗಿಚ್ಲಾಗ್ ಸುದ್ದೇನೆ ಇಲ್ಲೆ / ಪತ್ರನೂ ಹಾಕಿದ್ದಿಲ್ಲೆ ಅ೦ದ. ತಕ್ಷಣಕ್ಕೆ ಹಿ೦ದಿನ ದಿನಗಳ ನೆನಪಾಗಿ ಅ೦ದು ಬರದಿದ್ದು)



6 comments:

ಅನು. said...

ಖರೇಗುವಾ ಒಂದು ಗನಾ ಪತ್ರ ಬರದ್ದೆ. ಹಿಂದಿನ ಕಾಲದಲ್ಲಿ ಪತ್ರ ಬರೆಯುವ ಪರಿ ಹಾಗೂ ಅದರದೇ ಆದ ಸೊಗಡು, ಶಬ್ದಗಳ ಬಳಕೆ ಎಲ್ಲವನ್ನ ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಇದು ಸಹಕಾರಿ ಆಗ್ತು.ಪತ್ರ ಬರೀ ಪತ್ರವಾಗಿರದೇ ಆಗಿನ ಜೀವನದ ರೀತಿ, ನೀತಿಗಳು ಹಾಸುಹೊಕ್ಕಾಗಿ, ಜೊತೆ ಜೊತೆಗೆ ಸಾಂದರ್ಭಿಕವಾಗಿ ನಗೆಗಡಲಲ್ಲೂ ತೇಲಿಸುವ ನಿನ್ನ ಬರವಣಿಗೆ ಅಭಿನಂದನಾರ್ಹ...ನಿನ್ನೊಳಗಿನ ಮಾತುಗಳು ಹೀಗೇ ಅಮೂಲ್ಯ ರತ್ನಗಳಾಗಿ ಹೊರಹೊಮ್ಮಲಿ...

Vani Satish said...

ಗಂಗಣ್ಣಾ ಪತ್ರ ಚೊಲೋ ನಮ್ಮ್ ಭಾಷೆಲ್ಲೇ ಬರದ್ಯೋ . ಖುಶೀ ಆತು, ಯಲ್ಲಾ ನಮ್ನಿ ಸುದ್ದಿನು ಒಂದ್ರ ಹಿಂದೊಂದು ಸಲಾಗ್ ಬರದ್ದೆ.. ಆನುವಾ ಯನ್ ಅಣ್ಣಂಗೆ ಹೀಂಗೆ ನಮ್ಮ್ ಭಾಷೆಲ್ಲೇ ಪತ್ರ ಬರಿತಿದ್ದಿ.. ಆನು ಯಡಲ್ಲಿ ಕ್ವಾಲೆಜಿಗೆ ಹೋಪಕ್ಕರೆ.. ನೀ ಬರ್ದಾಂಗೆ ಉದ್ದ್ಕೆ ಎಲ್ಲ ಸುದ್ದಿನು ಬರ್ಕೋತ ಹೋಗ್ತಿದ್ದಿ.. Thanksu :) ಆನು ಪತ್ರ ಬರ್ದಿದ್ದು.. ನೆನಪಾತು :)

ಈಶ್ವರ said...

ತುಂಬಾ ಚೆನ್ನಾಗಿದ್ದು ಪತ್ರ.. ತುಂಬಾ ಸಲ ಓದಿದ್ದೆ..

ಶ್ಯಾಂ ಭಟ್, ಭಡ್ತಿ said...

:)

Sudarshan Hegde said...

ನಿನ್ ಹೇಳ್ದೆ ಕೇಳ್ದೆ ನಿನ್ ಪತ್ರ ಹಲ್ಬನದಲ್ಲಿ ನಿನ್ ಹೆಸರೇಳಿ ಹಾಕಿದಿದ್ದಿ..ಸುಮಾರ್ ಜನ ಲಾಯಕ್ ಮಾಡಿದ್ದ..ಅಂತೂ ಸರ್ವಕಾಲಿಕ ಮನರಂಜನೆ ಈ ಪತ್ರ.

ಹವ್ಯಕರ ಮಧ್ಯೆ ಬದುಕ್ತಾ ಇಪ್ಪವಕೇ ಹವ್ಯಕ ಭಾಷೆ ಮರ್ತೋಜು ಈಗ. ಮಳ್ ಧಾರಾವಾಹಿ ಕಾಲ್ದಲ್ಲಿ ಊರ್ ಬದಿ ಎಲ್ಲ ಹೆಂಗಸ್ರೂ ಸುಟ್ ಬೆಂಗ್ಳೂರ್ ಭಾಷೆ ಮಾತಾಡದೇಯ.

ನಿನ್ನ ಸ್ಮರಣಶಕ್ತಿಗೆ, ಭಾಷಾಪ್ರೀತಿಗೆ really hats off!(ನಮ್ ಭಾಷೆಲ್ ಎಂತಾ ಹೇಳವು ಹೇಳಿ ಗೊತ್ತಾಜಿಲ್ಲೆ.)

ಕಾವ್ಯಾ ಕಾಶ್ಯಪ್ said...

ಗಂಗಣ್ಯ ನಿನ್ನ ಹವ್ಯಕ ಪದ ಕೋಶಕ್ಕೆ ದೊಡ್ಡ ಸಲಾಮು ಮಾರಾಯ..... :) ಈಗಿನ ಅತ್ತೆಕ್ಕ ಸ್ವಾರಿ ಆಂಟಿಯಕ್ಕ (!) ಎಲ್ಲಾ ತಮ್ಮ ಮಕ್ಕಳ ಹತ್ರೆ ಬೆಂಗಳೂರು ಭಾಷೆ ಮಾತಾಡವ್ವೆಯ... ಇನ್ನು ಹೋಗ್ತ ಹೋಗ್ತ ನಮ್ ಭಾಷೆ ಹೇಳದು ಮೂಲಿಗೆ ಸೇರ್ಯೋಕ್ತೆನ....!