Wednesday, November 2, 2011

ಬ೦ದ್ಯನ? ಆಸ್ರಿಗ?



ಬ೦ದ್ಯನ? ಆಸ್ರಿಗ?
ಇದರ ಬಗ್ಗೆ ಹೇಳವು...ರಾಶಿ ಹೇಳದಿದ್ದು...ನಾಳೆ ಹೇಳತಿ...ಅಲ್ಲಿವರಿಗೆ ಇದ್ನ ಓದತ ಇರಿ...

(ಇದು ಯ೦ಗೆ ಹೊಡಸಲ ಮು೦ದೆ ಅಗ್ನಿಸಾಕ್ಷಿಯಾಗಿ ರಾ.ಅಣ್ಣ ವಿಶ್ಲೇಷಣೆ ಮಾಡಿದ್ದು...ಯನ್ನ ಸ್ವ೦ತದ್ದಲ್ಲ...ಆದ್ರುವ ನಿರೂಪಣೆ ಯ೦ದೆಯಾ ಬಿಲಾ)

ಬೆಟ್ಟೆಟ್ಟು ಬಿಸ್ನೀರ್ ಮಾಡುವ ವಿಧಾನ:
========================

ಅ) ಬೇಕಾಗುವ ಸಲಕರಣೆ
=========================================
) ಪಾತ್ರೆ
) ವಲೆ
) ಲೋಟ
) ಮಜ್ಗೆ ಕಪಾಟು

ಆ) ಬೇಕಾಗುವ ಸಾಮಾನುಗಳು
=========================================
) ನೀರು
) ಹಾಲು (ಹತ್ರ ನೆ೦ಟರಿಗೆ ಮಾತ್ರ )
) ಸಕ್ರೆ

ಇ) ಮಾಡುವ ವಿಧಾನ
=========================================
) ಬ೦ದವರ ಮಾತಾಡಸವು
) ಬ೦ದವ್ವು ದೂರದವ್ವ ಹತ್ತರದವ್ವ ನೋಡವು
) ಕಾಸಿಟ್ಟ ಹೊಗೆ ಕ೦ಪು ಎಸರು ಚರಿಗೆಯಿಂದ ಒಂದು ಲೋಟ ನೀರು ಮಗ್ಯವು
) ಅದಾದ ಮೇಲೆ ಮಜ್ಗೆ ಕಪಾಟ ಹತ್ರೆ ಬರವು
) ಅಲ್ಲಿ ದೂರದ ನೆ೦ಟ ಆದ್ರೆ ಮಜ್ಗೆ ಕಪಾಟಿ೦ದ ನೀರಿಗೆ ಹಾಲು ತೋರಿಸವು. ಹೆಚ್ಚು ಅಂದ್ರೆ ನೀರಿನ ಬಣ್ಣ ಹೋಪಸ್ಟು ಮಾತ್ರ ಹಾಲು ಹಾಕವು
) ರಾಶಿ ಬೆಳಿಕೆ ಆಪಲಾಗ. ಯಮ್ಮಿಗೆ ಕಣ್ ಬಿದ್ದೊಗ್ತು.
) ಈಗ ತಗ೦ಡು ಹೊರಗೆ ಬರವು
) ಹೊರಗೆ ಬಪ್ಪಕಿದ್ರೆ ಪ್ರಧಾನ ಭಾಗ್ಲ ದಾಟ ಮೊದಲು ಹೆಬ್ಬೆಟ್ಟಲ್ಲಿ ಲೋಟದಲ್ಲಿ ಅದ್ದಿ ಬಿಷಿ ಇದ್ದ ನೋಡವು.
) ಹದ ಬೆಚ್ಚಗಿದ್ರು ಸಾಕು.
) ಶಕ್ರೆ ಹಾಗಕಾಗ ಬಿಲ.
) ತ೦ದು ಹೊರಗೆ ಅಡವರ್ಯವು.

ಈ) ಸೂಚನೆ:
=========================================
) ನೆ೦ಟ ಮುಕ್ಕಾಲು ಕುಡಿದ ನ೦ತರ ಶಿ೦ಯ ಸಾಕನ ತಮ ಹೇಳವು
) "ಯಮ್ಮಲ್ಲಿ ಶಿ೦ಯ ಕಮ್ಮಿ ತಿ೦ತ್ಯ" ಹೇಳವು.
) ಇದಕ್ಕೆ ಬೆಟ್ಟೆಟ್ಟು ಬಿಸ್ನೀರ್ ಹೇಳಿ ಹೆಸರಿಟ್ಟ೦ವ ಆನಲ್ಲ. ಯ೦ಗೆ ತು೦ಬ ಬೇಕಾದವ್ವೊಬ್ರು ಇದಕ್ಕೆ ನಾಮಕರಣ ಮಾಡಿದ್ದ.
) ಇದು ಬೇರೆಯವರಿ೦ದ ಆಶಿರ್ವಾದಪೂರ್ವಕವಾಗಿ ಕೇಳಿಸಿಕೊ೦ಡದ್ದರಿ೦ದ ಪೀಜು ಇಲ್ಲೆ.
) ಮದ್ವೆ-ಉಪ್ನೆನ-ಶ್ರಾಧ್ಧಕ್ಕೆ ಕರ್ಯಲೇ ಹೋದವ್ಕೆ ಬೆಟ್ಟೆಟ್ಟು ಸರ್ವೇ ಸಾಮಾನ್ಯ.

No comments: