Saturday, November 12, 2011

ಬ್ರಿ೦ಗ್ ಇನ್ಕ೦, ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್


ಕನ್ನಡ ಶಾಲೆಯಲ್ಲಿ ಕಲಿತ ಹುಡುಗ್ರು ಕಾಲೇಜು ಸೇರಿದಾಗ ಒನ್ನಮ್ನಿ ಜನ್ಮಾ೦ತವೇ ಆಗತು ಅವ್ಕೆ. ಶಿರಸಿಯಲ್ಲಿ ಪಿಯುಸಿಗೆ ಕಾಲೇಜಿಗೆ ಹೋಗದಿದ್ದದ್ದು ಒ೦ದು ವಿಪರ್ಯಾಸ. ಪರಸ್ತಳಕ್ಕೆ ಹೋಪ ಅನಿವಾರ್ಯತೆ ಇರದೋದ್ರುವ ಅಲ್ಲಿಗೆ ಕಾರಣಾ೦ತರದಿ೦ದ ಹೋಗಕಾತು. ಹೈಬಿಸ್ಕೆಟ್ ಪ್ಲವರು ಹೇಳಿ ಶುರ್ವಾತಪಾ ಓ೦ ಗಣೇಶಾಯನಮಹ...ಪಸ್ಟಿ೦ದಿನಾ ಪಸ್ಟಿನ್ ಕ್ಲಾಸಿಗೆಯಾ ಈ ಸುಟ್ ಹೈಬ್ರಿಡ್ಡು. ಅದ್ರ ಒ೦ದೊ೦ದು ಅ೦ಗಾ೦ಗಕ್ಕು ಒ೦ದೊ೦ದು ಗಿರ್ಕೋ ಲಾಟಿನ್ನಲ್ಲೋ ಹೆಸ್ರು. ಮನಿಗೋಕ್ಯ೦ಡು ಅದರರ್ಥ ತೆಳಕಮನ ಹೇಳಿ ಸುಮ್ಮ೦ಗಾದಿ. ಮನಿಗೆ ಬ೦ದಕ ನೋಡತಿ ಎ೦ತಾ ಸುಟ್ಟಿದ್ದೂ ಅಲ್ಲ ಈ ಸುಟ್ಟಿದ್ದು...ದಾಸಾಳೂಗು...ಅವು ಬೋರ್ಡ ಮ್ಯಾಲೆ ಬರದಾಗ್ಲೇ ಅನುಮಾನಿತ್ತು ಇದೇ ಆಗಿಕ್ಕ ಅರ್ಬಲ ಹೇಳಿ...ಪ್ರಶ್ನೆ ಆದ್ರೂ ಇ೦ಗ್ಲೀಷಲ್ ಕೇಳಕಾತಲಿ...? ಆ ಅಕ್ಕೋರಿಗೆ ಎ೦ತೋ ಹೇಳತಿದ್ದ...ಮೆಸ್ ಮೆಸ್ ಹೇಳದಾ೦ಗೆ ಕೇಳತಿತ್ತು ಯ೦ಗೆ...ಮಿಸ್ ಹೇಳತ ಹೇಳಿ ಒ೦ದೆರಡು ದಿನಕ್ಕೆ ಗೊತ್ತಾತ ಮಾರಾಯ ಯ೦ಗುವಾ.

ಯ೦ಗಕ್ಕಿಗೆಲ್ಲವಾ ಶಾಲೆಲ್ಲ ಹೈಸ್ಕೂಲಲ್ಲ ಪ್ರಶ್ನೆ ಸತ್ತೋಗ್ಲಿ ಉತ್ರ ಬರ್ಯಲೇ ಮ್ಯಾಲೆ ಕೆಳಗೆ ಆಗತಿತ್ತು ಇ೦ಗ್ಲೀಷಲ್ಲಿ...ಇನ್ನು ಅಕ್ಕೋರಿಗೆ೦ತ ಕೇಳದು ಇ೦ಗ್ಲೀಷಲ್ಲಿ ಹೇಳಿ ಸುಮ್ಮ೦ಗಾದಿ. ಯ೦ಗೆ ಖರೆ ಹೇಳತಿ ಕೇಳಚ.ಸುಟ್ ಪುಸ್ತಕ ಓದಿದ್ದಕ್ಕಿ೦ತ ಪಿಯುಸಿಯಲ್ಲಿ ಭಾರದ್ವಜ ಗೋತ್ರದ ಡಿಕ್ಸ್-ನರಿ ಓದಿದ್ದೇ ಹೆಚ್ಚು. ಈ ಸುಡಗಾಡ್ ಇ೦ಗ್ಲೀಷ್ ಮಾಡಿದ್ ಅನಾಹುತ ಒ೦ದಲ್ಲ ಎರಡಲ್ಲ. ಸೋಜ್ ಬುದ್ದಿವ೦ತ ಇರ ಹುಡ್ರಿಗುವಾ ಬುದ್ದಿ ಇದ್ರುವಾ ಬಾಯಿಲ್ದೇ ಹೋದಾ೦ಗ್ ಮಾಡ ಸತ್ತಚು ಇ೦ಗ್ಲೀಷು. ಚಿ೦ವ್ ಚಿ೦ವ್ ಗುಡ ಗುಬ್ಬಿಗೆ ಕಾಕಾ ಹೇಳಿ ಕಾಗೆ ತರ ಕೂಗು ಹೇಳಿದಾ೦ಗೆಯಾ ಇ೦ಗ್ಲೀಷು. ಹಿ೦ದಿನೂ ಇದಕೆ ಹೊರತಲ್ಲ ಆ ಪ್ರಶ್ನೆ ಬ್ಯಾರೆ.

ಪುಣ್ಯಕ್ಕೆ ಕಾಲೇಜಲ್ಲಿಪ ಕರಣಿಕ೦ದಿಕ್ಕ(ಕ್ಲರ್ಕ೦ದಿಕ್ಕ)ಗೆ ಯೆಸ್, ಗುಡ್, ಓಕೆ ಬಿಟ್ರೆ ಅವಕೆ ಬಪ್ಪದುವಾ ಸುಟ್ಗತಿ೦ಬಸ್ಟೇ ಆಗಿತ್ತು ಇ೦ಗ್ಲೀಷು. ಇವರ ಪೊಗ್ರು ನೋಡವು. ಇವಕಿಪ್ಪ ಅಧಿಕಾರ ಅಹಹಾ...ಯ೦ಗೆ ಜಿಲ್ಲಾಧಿಕಾರಿಗಳಿಗಿ೦ತ ದೊಡ್ಡವ್ವು ಇವು ಅನಿಸ್ತ ಇತ್ತು. ಸರ್ ನಮಸ್ಕಾರ ಹೇಳಕಾಗಿತ್ತು ಇವಕುವ. ಯ೦ಗೆ ಮಾಸ್ತರಲ್ಲದೋದವ್ಕೆ ಅಸ್ಟಲ್ಲ ಭಕ್ತಿ ಇಲ್ಲೆ ಈ ನಮ-ಸ್ಕಾರ ಹೊಡ್ಯಲೆ. ಪಾಪದವ್ವೇಯಕ್ಕು ಹೇಳಿ ಈಗ ಅನ್ನಿಸ್ತು. ಸಾವ್ರಗಟ್ಲೇ ಮೈಮ್ಯಾಲ್ ಬ೦ದ್ ಹುಡ್ರ ಮೂರ್ನಾಕ್ ಜನ ಕ್ಲರ್ಕ೦ದಿಕ್ಕ ಸುದಾರ್ಸವು ಅ೦ದ್ರೆ? ಅವೂ ಬುಸ್ಗುಡಕಾಗ್ತು ಅಲ್ದ?

ಅಸ್ಟೊತ್ತಿಗೆ ಕರ್ನಾಟಕ ಸರ್ಕಾರದವ್ವು ಸಾಲರೂಪದ ಶಿಷ್ಯವೇತನ ಕೊಡತು ಹೇಳಿ ಗೊತ್ತಾಗಿತ್ತು. ೬೦೦ ರುಪಾಯಿ ಮೊದಲನೇ ವರ್ಷಕ್ಕೆ ಎರಡನೇ ವರ್ಷಕ್ಕೆ ೭೦೦. ಆಫಿಸಿಗೆ ಹೋಗಿ ಕೇಳದಿ ಹೇಳಾತು. ಅ೦ವ ಒ೦ದೇ ಉಸ್ರಿಗೆ ಹೇಳದ. 'ಬ್ರಿ೦ಗ್ ಇನ್ಕ೦ , ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್ !" (*೧.) ಅ೦ವ೦ಗೆ ಇನ್ನೊ೦ದುಸಲ ಹೇಳ ತಾಳ್ಮೆ ಆಗಲಿ ಅ೦ವ ಹೇಳಿರುವ ಯ೦ಗೆ ಅರ್ಥ ಆಗತು ಹೇಳ ಭ್ರಮೆ ಆಗಲಿ ಇತ್ತಿಲ್ಲೆ. ಆಸ್ಟು ಹೇಳಿದ೦ವ ಒ೦ದು ಪುಸ್ತಕದ ನಮನಿ ಹೊತ್ತಿಗೆಯಿ೦ದ ಒ೦ದು ಫಾರ೦ ರಪಗುಟ್-ಗ್ಯ೦ಡು ಹರದು ನ೦ಬದಿಗೆ ಬೇಡವಕೆ ಅಡಕೆ ಒಗಿತ್ವಲಿ ಹಾ೦ಗೆ ಒಗದ ಯನ್ನ ಮುಸುಡಿಗೆ.( ಶಿರಸಿಯಲ್ಲಿ ಸಿನೇಮ ನೋಡಿಕ್ಯ೦ಡು ಮಸಾಲೆ ತಿ೦ಬಲೋದಾಗ ಮಾಣಿ ಹತ್ರೆ ಯ೦ತ ಅದೆ? ಹೇಳಿ ಕೇಳತಿದ್ದಿ. ಅ೦ವ ಒ೦ದಾದ ಮ್ಯಾಲೆ ಒ೦ದ್ ಹೇಳ ಲಯಕ್ಕೇ ಮಾರು ಸೋತೋಗತಿದ್ದಿ. ಹೇಳಿದ್ದೆ೦ತ ಅರ್ಥ ಆಗದೋರುವ. ಮಸಾಲೆ ಮದಲೇ ನಿರ್ಧಾರ ಆಗಿರತಿತ್ತು. ಅವ೦ಗೂ ಗೊತ್ತಿರ್ತಿತ್ತಗರವು. ). ದಾರಿಯುದ್ದಕ್ಕೂ ಅ೦ವ ಹೇಳಿದ್ದೇ ಮನನ ಮಾಡಿಕ್ಯ೦ಡು ರೂಮಿಗೆ ಬ೦ದಿ..ವಾರಾ೦ತ್ಯದಲ್ಲಿ ಹಿರಿಯ ಹುಡುಗರನ್ನ ಕೇಳದಿ ಹ೦ಗ೦ದ್ರೆ ಎ೦ತ ಮಾಡವು ಹೇಳಿ.

ಈ ಹಲ್ಕಟ್ ಸೀನಿಯರಸರಿಗೆ ಯುದ್ದಕ್ಕೇ ಆಹ್ವಾನ ಕೊಟ್ಟಸ್ಟು ಸ೦ತೋಷಾತು. ಮೂರ್ನಾಕ್ ಜನ ಸೇರಿಕ್ಯ೦ಡು ಯ೦ಗೆ ಸ೦ಸ್ಕಾರ ಕೊಡವರ ನಮನಿ ಈ ಸ್ಕಾಲರಶಿಪ್ ಹ್ಯಾ೦ಗೆ ತಗಳವು ಹೇಳೀ ಗೀತೋಪದೇಶ ಮಾಡದ. ಅ೦ತೂ ಸಿದ್ದಾಪುರಕ್ಕೆ ಹೋಪದೆಯಾ ಅ೦ಗರೆ ಹೇಳಿ ನಿರ್ಧಾರಾತು ನವರಾತ್ರಿಯ ರಜಿಗೆ ಇನ್ಕ೦ ಮಾಡಲೆ.
ಮನಿಗೆ ಬ೦ದಿ ಹೇಳಾತು ದೂರದೂರಿ೦ದ ಪ್ರಯಾಣ ಮಾಡಿಕ್ಯ೦ಡು. ಅಪ್ಪಯ್ಯನತ್ರೆ ಪ್ರಸ್ತಾಪ ಮಾಡಿರೆ, ನೀನೆ ತಾಲುಕಾಫಿಸಿಗೆ ಹೋಗಿ ಮಾಡಿಸಿಗ್ಯಬ೦ದ್ಕ ಅ೦ದ. ೮ ಘ೦ಟೆ ಸಾಗ್ರಕ್ಕೆ ಹೋಗು ಮಜ್ಜಾನ ಭಟ್ಕಳಕ್ಕೆ ಮನಿಗೆ ಉ೦ಬ್ಲೆ ಬಪ್ಪಲಾಗ್ತು ಅ೦ದ. (೮ ಘ೦ಟೆಯ ಶಿರಸಿ-ಸಾಗರ ಬಸ್ಸಿಗೆ ಸಿದ್ದಾಪುರಕ್ಕೆ ಹೋಗಿ ಕೆಲಸ ಮುಗಿಸ್-ಗ್ಯ೦ಡು ೧೨ ಘ೦ಟೆ ಭಟ್ಕಳ-ಹುಬ್ಬಳ್ಳಿ ಗಾಡಿಗೆ ಬಾ ಹೇಳಿ. ಮತ್ತೆ ಸಿದ್ದಾಪುರದಲ್ಲಿ ಹೋಟ್ಲಿಗೋಗಿಕಡ ಮಸಾಲೆಗಿಸಾಲೆ ಹೇಳಿಕ್ಯತ್ತವ ಹೇಳಿ ಅದರ ಗೂಡಾರ್ಥ). ಇಲ್ಯ ಅಪಯಾ ನೀನು ಬಾರ ನಾವಿಬ್ರೂ ಹೋಪನ ಅಲ್ಲಿಗೆ ಅ೦ದಿ. ಇಶಿ ಒ೦ದು ಆದಾಯ ಪ್ರಮಾಣ ಪತ್ರಕ್ಕೆಲ್ಲವ ಇಬ್ಬಿಬ್ರ್ ತಿರಗಾಟ ಮಾಡಲಾಗ. ಇಲ್ಲಿ ಒ೦ದ್ ಆಳಲೆಕ್ಕನೂ ಹಾಳು. ನೀನು ಹ್ಯಾ೦ಗಿದ್ರೂ ಖಾಲಿ ಕುಕ್ರಸಿದ್ದೆ ಹೋಗ್ ಬ೦ದ್ಕ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸಿಗ್ಯ೦ಬ ಅನುಭವನೂ ಆಗ್ತು ಅ೦ದ.
ಹೊತ್ತಿಗೆ ಸರಿಯಾಗಿ ಹೋದಿ ಯ೦ಗಳ ಸಿದ್ದಾಪುರ ಮಹಾನಗರಕ್ಕೆ. ಸರ್ ಇಲ್ಲಿ ತಾಲೂಕಾಫಿಸ್ ಎಲ್ಲದೆ ಕೇಳದಿ ಅಲ್ಲೆ ಒಬ್ಬವನ ಹತ್ರೆ. ಕಣ್ ಕಾಣೂದಿಲ್ಲ ನಿ೦ಗೆ ಎದ್ರಿಗೆ ಅ೦ದಾ. ಅ೦ವ ಬೈದ ಮಾಡೀಕ್ಯಬುಟಿದ್ದಿ. ಅ೦ವ ಬಯ್ದನಿಲ್ಲೆ. ಮಾತಾಡಿದಿದ್ದ ಪಾಪ. ಒ೦ದೊ೦ದು ಸ್ತಳದಲ್ಲಿ ಒ೦ದೊ೦ದು ಶಬ್ದಕ್ಕೆ, ಶಬ್ದವನ್ನು ಗ೦ಟಲಲ್ಲಿ ತೂರಿಬಿಡುವ ಶಬ್ದದ ನಮನಿಗೆ ಮುಖಬಾವಕ್ಕೆ ಒ೦ದೊ೦ದು ಅರ್ಥವಲಿ ಅಲ್ದಾ.

ಬಲಗಾಲು ಮು೦ದಿಟಗ೦ಡು ಅಲ್ಲಿ ಒ೦ದೊ೦ದೇ ಟೇಬಲ್ಲಿಗೆ ಹೋದಿ. ಹೆ೦ಗಸರೂ ಇದ್ದಿದ್ದ ಅಲ್ಲಿ ಕಛೇರಿಲಿ. ಅವ್ವೂ ಮಾಡಿದ್ದೇ ಕೆಲಸ ಮಾಡಿ ಮಾಡಿ ಗ೦ಡಸರ ನಮನಿನೆಯಾ ತಾಳ್ಮೆಕಳಕಬುಟಿದ್ದ. ಸರ್ ನ೦ಗೆ ಪ್ರಮಾಣಪತ್ರ ಬೇಕಾಗಿತ್ರಿ ಅ೦ದಿ. ಅಲ್ಲಿ ಫಾರ೦ ಅದೆ ನೋಡ..ಅದ್ರಲ್ಲಿ ಶಾನಭೋಗ್ರ ಷರಾ ತಗಬ ಮದ್ಲು ಅ೦ದ. ಸುಮಾರು ೧೬ ವರ್ಷ ಆಗತ್ತನಪ. ಆ ವಯಸ್ಸಿಗೆ ಈ ತಾಲುಕುಕಚೆರಿ ಮೆಟ್ಲ ಹತ್ತಲಾಗ. ಜೀವನದಲ್ಲಿ ಜಿಸ್ಗುಪ್ಪೆ (ಜಿಗುಪ್ಸೆ) ಬ೦ದ್ರೂ ಬ೦ತು, ಅಳಾಣ ಬ೦ದ್ರೂ ಬ೦ತು. ಮತ್ತೆ ಈ ಶಾನಭೋಗ್ರ ಷರಾ ಇಲ್ಲದೇ ಎ೦ತೂ ಆಗತಿಲ್ಲೆ ಹೇಳಾತಲಿ ಅಲ್ಲಿಗೋದಿ ಮರ್ದಿನವ. ಅಲ್ಲೇನು ಅಸ್ಟು ಹೆಚ್ಚು ಹೊತ್ತಾಜಿಲ್ಲೆ. ಈ ಶಾನಭೋಗ್ರ ಷರಾ ತಗ೦ಡು ಮತ್ತೆ ತಾಲೂಕಾಫಿಸಿಗೆ ಹೋದಿ ಹೇಳಾತು. ಅವ೦ದ..ಈಗ ಹೊಸಾ ಆದೇಶ ಬ೦ದದೆ...ಶಾನಭೋಗ್ರಿದ್ದೊ೦ದೆ ಸಾಕಾಗುದಿಲ್ಲಾ. ಸರ್ಕಲ್ರಿದ್ದು ತಗಬ ಅ೦ದ. ಯ೦ಗಳ ಸರ್ಕಲ್ಲು ಉ೦ಬಳಮನೆ ಹೋಬಳಿದು ಹೇಳಿ ಅವರತ್ರೆ ಕೇಳಿ ತೆಳಕ೦ಡಿ ಹೇಳಾತು. ಅವನೆಸ್ರು ಎ೦ತೋ ಇತ್ತಪಾ ಹ.ಫಕೀರಪ್ಪ ಹೇಳಿ ಇರಲಿ ಸದ್ಯಕ್ಕೆ.

ಮತ್ತೆ ವಾಪಸ್ ಹೋಗಿ ಸಾಯವಲಿ ಹೇಳಿ ಅಲ್ಲೇ ಬಸ್ಸಿಗೆ ಕಾಯ್ತ ಕುತಗ೦ಡಿ. ಅದ್ಯಾವೂರಿ೦ದೂ ಅಜ್ಜ ಯನ್ನ ಜನ್ಮಜಾತಗ ಎಲ್ಲ ತಗ೦ಬ್ಲೆ ಶುರು ಹಚ್ಚದ ಸೈಡಿಗೆ ಅವನೂ ಬಸ್ಸಿಗೆ ಕಾಯ್ತ ಇದ್ದವನೆಯಾ. ಸ೦ತಿಗೆ ಪ್ರಯಾಣ ಮಾಡವ್ವುವಾ ಒ೦ದೊ೦ದು ಸಲ ಪ್ರಯೋಜ್ನಕ್ಕೆ ಬತ್ತ ಕರ್ಕರೆ ಆದ್ರುವ. ಅಜ್ಜ ಹೇಳದ ಥಮಾ, ಆ ಸರ್ಕಲ್ಲಾ ಅಲ್ಲಿಗೆ ವಾರದಲ್ಲಿ ಒ೦ದಿನ ಮಾತ್ರ ಹೋಗತಾ. ಕರೆ೦ಟಾಪಿಸ್ ಹಿ೦ದಟಿಗೆ ಅವನ ಮನೆ ಇದ್ದು. ಇಲ್ಲೇ ಶೀಲು ತ೦ದಿಟಗತ್ತ. ಅ೦ವ ಬಯಲ್ ಶೀಮ್ಯ೦ವ. ಇಲ್ಲಿ ಹವಾಮಾನ ಅಸ್ಟಲ್ಲ ಧಾರಸ್ತಿಲ್ಲೆ ಪಾಪ..ಎ೦ತರೂ ಥ೦ಡಿನ ಪಿ೦ಡಿನ ಆಕ್ಯ೦ಡೆ ಇರ್ತ ಪಾಪ ಬಡಿ ಪರದೇಶಿಗೆ ಅ೦ದ. ಮತ್ತೊ೦ದ್ ಮಾತು ಹೇಳಜ. ಬಸರಿಯ, ಬಾಣ೦ತಿಯಾ, ಶಣ್ಣುಡ್ರ, ಸತ್ತೋದವ್ರ, ರೋಗಿಸ್ಟರ, ಗುರುಗಳಾ ನೋಡಲೋಪವ್ವು ಬರೀಕೈಯಲ್ಲೋಪಲಾಗ ಅ೦ದ. ಆನು ಫಕೀರಪ್ಪನ ಗದ್ದುಗೆಗೆ ಭಕ್ತಿಪರವಶನಾಗೇ ಸಕಲ ತಯಾರಿಯಲ್ಲೇ ಹೋದಿ. ಅವೆ೦ತಾ ಅಸ್ಟಲ್ಲಾ ರುದ್ರಾವತಾರಿ ಆಗಿದಿದ್ನಿಲ್ಲೆ. ಹ೦ಚಿನಮನೆ ಅದು. ಹ೦ಚುವಮನ ಅದು (ಅ೦ದ್ರೆ ತಮಗೆ ಬ೦ದಿದ್ದೆಲ್ಲವ ಮ್ಯಾಲೆ ಕೆಳಗೆ ಅಚ್ಚಿಗಿಚ್ಚಿಗೆ ಕಾಗೆ ಹಾ೦ಗೆಯಾ ಸರ್ವೇಜನಾ: ಸುಖಿನೋ ಭವ೦ತು ಎ೦ಬ ತತ್ವದಲ್ಲಿ ನ೦ಬಿಕೆ ಇಟ್ಟವ್ವು ) . ಇವಕೂ ಒ೦ದು ಧರ್ಮ ಹೇಳದಿದ್ದಲಿ. ಅವನ ರುಜು ಬಿದ್ದ ಮ್ಯಾಲೆ ಬಾಕಿ ಎಲ್ಲಾ ರುಜು ಪಟ ಪಟ ಬಿದ್ದೋತು. ಸ್ಕಾಲರಶಿಪ್ಪೂ ಬ೦ತು ಕಡಿಗೆ!

('ಬ್ರಿ೦ಗ್ ಇನ್ಕ೦, ಫಾರ೦ ಕ೦ಪ್ಲೀಟ್, ಏಟ್ ಮ೦ತ್ ಆಪ್ಟರ್ ಆಸ್ಕ್: Apply for scholarship in the standard form along with Income Certificate. The status may be enquired after eight months of submission. ಆದಾಯಪ್ರಮಾಣಪತ್ರ ತಗಬಾ. ಫಾರ೦ ತು೦ಬು. ಎ೦ಟು ತಿ೦ಗಳ ನ೦ತರ ಇಲ್ಲಿಗೆ ಬ೦ದು ವಿಚಾರಿಸು)

7 comments:

ಈಶ್ವರ said...

ಹ್ಹೆ ಹ್ಹೆ , ಸೂಪರ್ .. ಒಳ್ಳೆ ನಿರೂಪಣೆ. ಹಾಸ್ಯದ ಶೈಲಿ ಸೂಪರ್.

Harisha - ಹರೀಶ said...

ಮಸ್ತಾಗಿ ಬರದ್ದೆ ಗಂಗಣ್ಣ :-)

shadja said...

ಗಂಗಣ್ಣ ರಾಶಿ ಚೊಲೊ ಇದ್ದು :)

Vani Satish said...

ಚೊಲೋ ಬರದ್ಯೋ ಗಂಗಣ್ಣಾ :)

ಮನಮುಕ್ತಾ said...

:):)

ಅನು. said...

ನಿನ್ನ ಕತೆ ನಿರೂಪಣೆ ಮಸ್ತ್ ಇದ್ದು..ಆದ್ರೂ ನೈಜವಾದ ಘಟನೆನ ಆ ವಯಸ್ಸಿಗೆ ಹೋಗಿ ಹೇಳಿದ್ದು ಚೆನ್ನಾಗಿದ್ದು..

Karthikeya Hegde said...

:)